ಆನೇಕಲ್ : ಬನ್ನೇರುಘಟ್ಟ ರಸ್ತೆಯ ಸಿ. ಕೆ ಪಾಳ್ಯದಲ್ಲಿ ಇರುವ ಸಾರಾ ಸೋಲ್ ಎಂಬ ಕಂಪೆನಿ ಏಕಾಏಕಿ 350 ಜನರನ್ನು ಕೆಲಸದಿಂದ ತೆಗೆದಿದೆ. ಕಂಪನಿಯ ಈ ನಿರ್ಧಾರವನ್ನು ಖಂಡಿಸಿ ಕಾರ್ಮಿಕರು ಕಂಪನಿ ಎದುರುಗಡೆ ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ಕಾರಣಕ್ಕೆ ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು. ಆಗ ಕಂಪನಿ ಸಹ ಬಂದ್ ಆಗಿತ್ತು. ಇದೀಗ ಏಕಾಏಕಿಯಾಗಿ ಕೆಲಸಗಾರರನ್ನು ಕಂಪನಿ ತೆಗೆದು ಹಾಕಿದೆ. ಜೊತಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ.
ಇದರಿಂದಾಗಿ ರಾಮನಗರ, ಕನಕಪುರ, ಆನೇಕಲ್ ಭಾಗದಿಂದ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರಿಗೆ ಸಂಕಷ್ಟ ಎದರುರಾಗಿದೆ. ಕಳೆದ ಹತ್ತರಿಂದ ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಇಂದು ಏಕಾಏಕಿಯಾಗಿ ತೆಗೆಯಲಾಗಿದೆ. ಈಗ ಸಂಬಳ ನೀಡಬೇಕಾಗುತ್ತದೆ ಎಂದು ಕೆಲಸದಿಂದ ತೆಗೆಯಲಾಗಿದೆ ಎಂದು ಕಾರ್ಮಿಕರು ಆಕ್ರೋಶ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾರ್ಮಿಕರು ಕಂಪನಿ ಎದುರು ಪ್ರತಿಭಟನೆ ನಡೆಸಿದ್ದಾರೆ.








