ಬಾಗಲಕೋಟೆ : ಜುಲೈ 1 ಕ್ಕೆ ಶಾಲೆ ಆರಂಭ ಡೌಟ್ ಇದೆ. ಪಾಲಕರ ಸಭೆಯ ಬಳಿಕ, ಅವರ ಅಭಿಪ್ರಾಯದ ನಂತರವೇ ಶಾಲೆ ಓಪನ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ 1 ಶಾಲೆ ಆರಂಭ ಎನ್ನುವುದು ಸರ್ಕಾರದ ನಿರ್ಧಾರಿತ ದಿನಾಂಕ ಅಲ್ಲವಲ್ಲ. ಶಿಕ್ಷಣ ಇಲಾಖೆ ಯೋಚಿಸಿರುವ ದಿನಾಂಕವಷ್ಟೆ. ಕೇಂದ್ರ ಸರ್ಕಾರದಿಂದ ಮೇ 31 ಪತ್ರ ಬಂದಿದೆ. ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಯೋಚನೆ ಮಾಡಬೇಕು. ಇದು ಮಾಡುವಾಗ ರಾಜ್ಯದ ಪೋಷಕರ ಜೊತೆಗೆ ಸಂವಾದ ಮಾಡಬೇಕಾಗಿದೆ. ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಿದೆ.
ಈ ಹಿನ್ನಲೆ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಸಭೆಯನ್ನು ಜೂನ್ 10, 11, 12 ರಂದು ಪಾಲಕರ ಜೊತೆ ನಡೆಸಲು ಸೂಚನೆ ನೀಡಿದ್ದೇನೆ. ಜೂನ್ 15 ರ ಒಳಗಾಗಿ ಪಾಲಕರು, ಪೋಷಕರು, ಎಸ್ ಡಿಎಂ ಸಿ ಸದಸ್ಯರ ಅಭಿಪ್ರಾಯ ಕ್ರೂಢೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು. ಕೊರೊನಾ ಬಹಳಷ್ಟು ಪರಿಣಾಮ ಶಿಕ್ಷಣ ಇಲಾಖೆಯ ಮೇಲೆ ಬೀರಿದೆ. ಶಾಲೆ ಆರಂಭಿಸಿದರೆ ಮುಂದಿನ ತರಗತಿಗಳು ಹೇಗೆ…? ಮಾಡಬೇಕು .
ಶಿಷ್ಟ ಮಾಡಬೇಕಾ ಆಲ್ಟ್ರನೇಟ್ ಮಾಡಬೇಕಾ? ಮಕ್ಕಳ ಆಟ, ವ್ಯಾಯಾಮ ಹೇಗೆ? ಈ ಬಗ್ಗೆ ಪಾಲಕರ ಅಭಿಪ್ರಾಯ ಪಡೆಯಲಾಗುವುದು. ಇದರ ಜೊತೆಗೆ ಫ್ರೀ ಪ್ರೈಮೇರಿ ಆರಂಭ ಬೇಡ ಎನ್ನುವ ಅಭಿಪ್ರಾಯವೂ ಇದೆ. ನಾನು ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇದೆಲ್ಲದರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತೇವೆ. ಅಲ್ಲಿಂದ ಸಲಹೆ ಬಂದ ಮೇಲೆ ಶಾಲೆ ಯಾವಾಗ ಆರಂಭಿಸಬೇಕು ಎಂದು ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.








