Belgaum | ಕಬಡ್ಡಿ ಆಟದ ವೇಳೆ ಬಡಿದಾಡಿಕೊಂಡ ಯುವಕರು
ಬೆಳಗಾವಿ : ಕಬಡ್ಡಿ ಆಡುತ್ತಿದ್ದ ವೇಳೆ ಎರಡು ತಂಡದ ಆಟಗಾರರು ಬಡಿದಾಡಿಕೊಂಡಿರುವ ಘಟನೆ ಬೆಳಗಾವಿಯ ಚಂದರಗಿ ಕ್ರೀಡಾ ಶಾಲಾ ಆವರಣದಲ್ಲಿ ನಡೆದಿದೆ.
ಚಂದರಗಿ ಹಾಗೂ ಕಟಕೋಳ ಶಾಲೆಯ ಯುವಕರ ತಂಡಗಳ ಫೈನಲ್ ಪಂದ್ಯ ನಡೆಯುತ್ತಿತ್ತು.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ.

ಜಗಳ ಜೋರಾಗಿ ಬಡಿಗೆ ಹಿಡಿದು ಚಂದರಗಿ ಹಾಗೂ ಕಟಕೋಳ ಗ್ರಾಮದ ಯುವಕರು ಬಡಿದಾಡಿಕೊಂಡಿದ್ದಾರೆ.
ಯುವಕರ ಬಡಿದಾಟ ನೋಡಿ ಚಂದರಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. Belgaum Youths fight during Kabaddi game
ಈ ಬಡಿದಾಟದಲ್ಲಿ ಕೆಲ ಯುವಕರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.








