Maharashtra – ಹರಿಹರೇಶ್ವರ ಸಮುದ್ರಲ್ಲಿ ದೋಣಿಯಲ್ಲಿ ಸಿಕ್ಕ AK 47…
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಹರಿಹರೇಶ್ವರ ಕರಾವಳಿಯ ಸಮುದ್ರದಲ್ಲಿ ಅನುಮಾನಾಸ್ಪದ ದೋಣಿ ಪತ್ತೆಯಾಗಿದೆ. ದೋಣಿಯಲ್ಲಿ ಮೂರು ಎಕೆ-47 ಮತ್ತು ಬುಲೆಟ್ಗಳ ಪತ್ತೆಯಾಗಿವೆ. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯ ಮೀನುಗಾರರೊಬ್ಬರು ದೋಣಿಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹಗ್ಗದ ಸಹಾಯದಿಂದ ದೋಣಿಯನ್ನು ದಡಕ್ಕೆ ಎಳೆದು ತಪಾಸಣೆ ನಡೆಸಿದ್ದಾರೆ. ದೋಣಿಯಲ್ಲಿ ದೊಡ್ಡ ಕಪ್ಪು ಪೆಟ್ಟಿಗೆ ಸಿಕ್ಕಿದ್ದು. ಅದರಲ್ಲಿ ಮೂರು ಎಕೆ -47 ಮತ್ತು ಬುಲೆಟ್ಗಳು ಪತ್ತೆಯಾಗಿವೆ. ದೋಣಿ ಸಿಕ್ಕ ಈ ಪ್ರದೇಶ ಮುಂಬೈನಿಂದ ಸುಮಾರು 190 ಕಿ.ಮೀ. ದೂರದಲ್ಲಿದೆ.
ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದ್ದ ಬಾಕ್ಸ್ನಲ್ಲಿ ನೆಪ್ಚೂನ್ ಮ್ಯಾರಿಟೈಮ್ ಸೆಕ್ಯುರಿಟಿ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು UK ಮೂಲದ ಕಂಪನಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮಾಹಿತಿ ನೀಡಿದ್ದಾರೆ. ಬೋಟ್ ಆಸ್ಟ್ರೇಲಿಯಾದ ಪ್ರಜೆಗೆ ಸೇರಿದ್ದು ಯುರೋಪಿಗೆ ಹೋಗುತ್ತಿತ್ತು. ಈವರೆಗೆ ಬಂದಿರುವ ಮಾಹಿತಿ ಪ್ರಕಾರ ಸಮುದ್ರದಲ್ಲಿ ದೋಣಿಯ ಇಂಜಿನ್ ಹಾಳಾಗಿದ್ದ ಕಾರಣ ಕೊರಿಯನ್ ದೋಣಿಯ ಮೂಲಕ ಜನರನ್ನು ಸ್ಥಳಾಂತರಿಸಲಾಗಿದೆ. ಇದೀಗ ಬೋಟ್ ಹರಿಹರೇಶ್ವರ ಕಡಲತೀರ ತಲುಪಿದೆ. ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಮತ್ತು ಆಡಳಿತವನ್ನು ಎಚ್ಚರಿಸಲಾಗಿದೆ ಉಪ ಮುಖ್ಯಮಂತ್ರಿ ಹೇಳಿದ್ದಾರೆ.








