ಮುಂಬೈ ಪೊಲೀಸರಿಗೆ ಪಾಕಿಸ್ತಾನದಿಂದ ಬೆದರಿಕೆ ಸಂದೇಶ – 26/11 ರೀತಿ ದಾಳಿ ಬೆದರಿಕೆ..
26/11 ರೀತಿಯಲ್ಲಿಯೇ ದಾಳಿ ಮಾಡುವುದಾಗಿ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಮ್ ಗೆ ಬೆದರಿಕೆ ಸಂದೇಶ ಬಂದಿದೆ. ಮುಂಬೈ ಸಂಚಾರ ನಿಯಂತ್ರಣ ವಿಭಾಗದ ವಾಟ್ಸಾಪ್ ನಂಬರ್ ಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ವರದಿಗಳ ಪ್ರಕಾರ ಪಾಕಿಸ್ತಾನಿ ಸಂಖ್ಯೆಯಿಂದ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಆತನ ನಂಬರ್ ಟ್ರೇಸ್ ಮಾಡಿದಾಗ ಭಾರತದ ಹೊರಗಡೆ ಇರುವುದು ಪತ್ತೆಯಾಗಿದೆ. ಮುಂಬೈನಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಭಾರತದಲ್ಲಿ 6 ಜನರು ಯೋಜನೆಯನ್ನು ಕಾರ್ಯಗತಗೊಳಿಸುತ್ತಾರೆ ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಸಾಗಿಸುತ್ತಿದ್ದ ದೋಣಿಯನ್ನು ವಶಪಡಿಸಿಕೊಂಡ ಎರಡು ದಿನಗಳ ನಂತರ ಬೆದರಿಕೆ ಬಂದಿರುವುದು ಗಮನಿಸಬೇಕಾದ ಸಂಗತಿ.
ಆಗಸ್ಟ್ 18 ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎರಡು ಅಪರಿಚಿತ ಅನುಮಾನಾಸ್ಪದ ದೋಣಿಗಳು ಪತ್ತೆಯಾಗಿದ್ದವು. ಹರಿಹರೇಶ್ವರ ಕಡಲತೀರದಲ್ಲಿ ಒಂದು ದೋಣಿ ಪತ್ತೆಯಾಗಿದ್ದು, ಅದರಲ್ಲಿ ಕಸ್ಟಮ್ ನಿರ್ಮಿತ ನೆಪ್ಚೂನ್ ಮೆರಿಟೈಮ್ ಸೆಕ್ಯುರಿಟಿ ಬಾಕ್ಸ್‌ನಲ್ಲಿ ಮದ್ದುಗುಂಡುಗಳು ಮತ್ತು ಸ್ಫೋಟಕಗಳೊಂದಿಗೆ 3 ಎಕೆ -47 ರೈಫಲ್‌ಗಳು ಪತ್ತೆಯಾಗಿದ್ದರೆ, ಎರಡನೇ ದೋಣಿ ಭರನ್ ಖೋಲ್ ಕಿನಾರಾ ಬಳಿ ಪತ್ತೆಯಾಗಿದೆ, ಅದರಲ್ಲಿ ಲೈಫ್ ಜಾಕೆಟ್ ಮತ್ತು ಕೆಲವು ದಾಖಲೆಗಳು ಕಂಡುಬಂದಿವೆ.








