
ಕುಲದೀಪ್ ಯಾದವ್.. ಟೀಮ್ ಇಂಡಿಯಾದ ಅದ್ಭುತ ಸ್ಪಿನ್ನರ್. ಮಹತ್ವದ ಘಟ್ಟದಲ್ಲಿ ವಿಕೆಟ್ ಉರುಳಿಸುವ ಕುಲದೀಪ್ ಯಾದವ್ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಕುಲದೀಪ್ ಎದುರಾಳಿ ತಂಡದ ರನ್ ವೇಗಕ್ಕೂ ಕಡಿವಾಣ ಹಾಕುವಂತಹ ಸಾಮಥ್ರ್ಯ ಹೊಂದಿದ್ದಾರೆ. ಈಗಾಗಲೇ ಆರು ಟೆಸ್ಟ್ ಪಂದ್ಯಗಳಲ್ಲಿ 24 ಹಾಗೂ 60 ಏಕದಿನ ಪಂದ್ಯಗಳಲ್ಲಿ 104 ವಿಕೆಟ್ ಮತ್ತು 21 ಟಿ-ಟ್ವೆಂಟಿ ಪಂದ್ಯಗಳಲ್ಲಿ 39 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಕುಲದೀಪ್ ಟೀಮ್ ಇಂಡಿಯಾದಿಂದ ಹೊರುಗುಳಿದಿರುವುದು ತೀರಾ ಕಮ್ಮಿ.
ನಿಮಗೆ ನೆನಪಿರಬೇಕು. ಒಂದು ಬಾರಿ ಧೋನಿಯ ಕೈಯಿಂದ ಬೈಸಿಕೊಂಡಿರುವುದು. ಒಂದು ಪಂದ್ಯವೊಂದರಲ್ಲಿ ವಿಕೆಟ್ ಹಿಂದುಗಡೆ ನಿಂತು ಕುಲದೀಪ್‍ಗೆ ಸಲಹೆಗಳನ್ನು ನೀಡುತ್ತಿದ್ದರು. ಆಗ ಕುಲದೀಪ್ ಧೋನಿಯ ಸಲಹೆಯನ್ನು ನಿರಾಕರಿಸಿದ್ದರು. ಆಗ ಧೋನಿ ಸಿಟ್ಟಿನಿಂದ ನಾನು ಏನು ಹುಚ್ಚನ ಥರಾ ಕಾಣುತ್ತೇನಾ.. ನಾನು 300 ಏಕದಿನ ಪಂದ್ಯಗಳನ್ನು ಆಡಿದ್ದೇನೆ ಅಂತ ಕುಲದೀಪ್‍ಗೆ ಹೇಳಿರುವುದನ್ನು ಸ್ವತಃ ಕುಲದೀಪ್ ಯಾದವ್ ಅವರೇ ಹೇಳಿಕೊಂಡಿದ್ದರು.
ಇದೀಗ ಕುಲದೀಪ್ ಯಾದವ್ ಹಾಲಿ ನಾಯಕ ವಿರಾಟ್ ಕೊಹ್ಲಿಯವರನ್ನು ಗುಣಗಾನ ಮಾಡಿದ್ದಾರೆ. ಕೊಹ್ಲಿ ಮತ್ತು ನನ್ನ ನಡುವಿನ ಬಾಂಧವ್ಯ ಚೆನ್ನಾಗಿದೆ ಅಂತ ಯಾದವ್ ಹೇಳಿದ್ದಾರೆ. ಅದು ಅಲ್ಲದೆ ಕುಲದೀಪ್ ಯಾದವ್ ಅವರು ವಿರಾಟ್ ಕೊಹ್ಲಿಯವರ ನಂಬಿಕಸ್ಥ ಆಟಗಾರ. ಯಾವುದೇ ಸರಣಿ ಇರಲಿ, ತಂಡದಿಂದ ಹೊರಗುಳಿದಿರುವುದು ತೀರಾ ಕಮ್ಮಿ. ಬಹುಶಃ ಹೀಗಾಗಿಯೇ ಕುಲದೀಪ್ ಯಾದವ್ ವಿರಾಟ್ ಕೊಹ್ಲಿ ತನಗೆ ಹೇಗೆ ಬೆಂಬಲ ನೀಡುತ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.
ಮುಖ್ಯವಾಗಿ ನಾಯಕನ ನಂಬಿಕೆ ಇರಬೇಕು. ನಾಯಕನಾದವು ನಂಬಿಕೆ ಇಟ್ಟುಕೊಂಡ್ರೆ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಸುಲಭವಾಗುತ್ತದೆ. ವಿರಾಟ್ ಕೊಹ್ಲಿಯವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಒತ್ತಡದ ಸನ್ನಿವೇಶವನ್ನು ಯಾವ ರೀತಿ ಬಗೆಹರಿಸಬಹುದು ಎಂಬುದನ್ನು ಅವರಿಂದ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಯುವ ಆಟಗಾರರಿಗೆ ಸ್ಪೂರ್ತಿ ತುಂಬುತ್ತಾರೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.
ನನಗೆ ಇನ್ನೂ ನೆನಪಿದೆ. ತಂಡಕ್ಕೆ ಹೊಸದಾಗಿ ಆಯ್ಕೆಯಾದಾಗ ವಿರಾಟ್ ನನಗೆ ತುಂಬಾನೇ ಸಹಾಯ
ಮಾಡಿದ್ದಾರೆ. ಅದು ಈಗಲೂ ಅಷ್ಟೇ. ನನಗೆ ಯಾವಾಗಲೂ ಬೆನ್ನಲುಬಾಗಿ ನಿಲ್ಲುತ್ತಾರೆ. ನಮ್ಮ ಕೌಶಲ್ಯಗಳ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಾರೆ. ಹಾಗೇ ನಮ್ಮ ನಡುವೆ ಉತ್ತಮ ಬಾಂಧವ್ಯವೂ ಇದೆ. ನನಗೆ ವಿರಾಟ್ ಅವರ ಆ ಗುಣ ತುಂಬಾ ಇಷ್ಟವಾಯ್ತು. ಅದು ಏನು ಅಂದ್ರೆ, ವಿರಾಟ್ ಕೊಹ್ಲಿ ತಂಡ ಮತ್ತು ಆಟಗಾರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿಯೇ ಮೈದಾನದಲ್ಲಿ ನಮಗೆ ಸುಲಭವಾಗಿ ಶ್ರೇಷ್ಠ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.








