ಬಾದಾಮಿ : ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಸ್ವಕ್ಷೇತ್ರ ಬಾದಾಮಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಇತರಬಿಇಓಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೊಮ್ಮೆ ನಿನ್ ಬಗ್ಗೆ ಕಂಪ್ಲೆಂಟ್ ಬಂದ್ರೆ ಸಸ್ಪೆಂಡ್ ಮಾಡುವೆ ಹುಷಾರ್ ಎಂದು ವಾರ್ನಿಂಗ್ ನೀಡಿದ್ದಾರೆ. ಬಿಇಒ ಬಗ್ಗೆ ಕೆಲ ಶಿಕ್ಷಕರು ಸಿದ್ದರಾಮಯ್ಯ ಬಳಿ ದೂರಿದ್ದರು. ಬಿಇಒ ವಿರುದ್ದ ಸಿದ್ದರಾಮಯ್ಯ ಅವರಿಗೆ ಕೆಲ ಶಿಕ್ಷಕರು ಪತ್ರ ಬರೆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಿಇಒ ರುದ್ರಪ್ಪ ಹುರುಳಿಗೆ ಮೇಲೆ ಫುಲ್ ಗರಂ ಆಗಿದ್ದರು.








