Hubli | ಪಾಲಿಕೆ ಆವರಣದಲ್ಲಿ ಗಣೇಶೋತ್ಸವಕ್ಕೆ ಅನುಕು ಪ್ರದರ್ಶನ
ಹುಬ್ಬಳ್ಳಿ : ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಹುಬ್ಬಳ್ಳಿ ಗಣೇಶೋತ್ಸ ಮಂಡಳಿ ಸಾಕಷ್ಟು ದಿನಗಳಿಂದ ನಾನಾ ರೀತಿಯಲ್ಲಿ ಅಧಿಕಾರಿಗಳ ವರ್ಗಕ್ಕೆ ಮನವಿ ಸಲ್ಲಿಸುತ್ತಿದೆ.
ಆದ್ರೂ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವುದಕ್ಕೆ ಹುಬ್ಬಳ್ಳಿ ಗಣೇಶೋತ್ಸವ ಮಂಡಳಿ ಎಲ್ಲ ಇಲಾಖೆಗೆ ಹೇಗೆಲ್ಲಾ ಮನವಿ ಮಾಡಿಕೊಂಡಿದೆ ಎಂಬುದನ್ನು ಪಾಲಿಕೆ ಆವರಣದಲ್ಲಿ ಗಣೇಶ ಮೂರ್ತಿಯನ್ನು ಹಾಕಿಕೊಂಡು ಅನುಕು ಪ್ರದರ್ಶನ ಮಾಡಿದೆ.

ಹುಬ್ಬಳ್ಳಿ ಗಣೇಶೋತ್ಸವ ಮಂಡಳಿ ಗಣೇಶೋತ್ಸವಕ್ಕೆ ಅನುಮತಿ ಕೋರಿ ಪೊಲೀಸ್ ಇಲಾಖೆ, ಹವಾ ನಿಯಂತ್ರಣ ಇಲಾಖೆ, ಮಹಾನಗರ ಪಾಲಿಕೆ, ಹೆಸ್ಕಾಂ, ರಾಜಕೀಯ ಹೀಗೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಆ ಅಧಿಕಾರಿಗಳು ಹೇಗೆಲ್ಲಾ ಹರಿಕೆ ಉತ್ತರ ನೀಡಿ ಕಳಿಸಿದ್ದಾರೆ ಎಂಬುದನ್ನು ಗಣಪತಿ ಮೂರ್ತಿಯನ್ನು ಹಾಕಿಕೊಂಡು ಅನುಕು ಪ್ರದರ್ಶನ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








