ಹೊಸದಿಲ್ಲಿ, ಜೂನ್ 3 : ಅಮೆರಿಕದಿಂದ ಮುಂದಿನ ವಾರ ಭಾರತಕ್ಕೆ 100 ವೆಂಟಿಲೇಟರ್ ಗಳನ್ನು ರವಾನಿಸಲು ಸಿದ್ಧತೆ ನಡೆಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ನಿನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆಮಾಡಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಪ್ರಮುಖ ವಿಷಯಗಳ ಕುರಿತಾಗಿ ಮಾತನಾಡಿದ್ದಾರೆ.
ಟ್ರಂಪ್ ಅವರು ತಮ್ಮಮಾತುಕತೆಯಲ್ಲಿ ಜಿ-7 ಶೃಂಗಸಭೆ, ಉಭಯ ದೇಶಗಳ ಕೊರೋನಾ ವೈರಸ್ ಪರಿಸ್ಥಿತಿ, ಭಾರತ-ಚೀನಾ ಗಡಿ ವಿಚಾರ, ಅಮೆರಿಕಾದಲ್ಲಿ ನಡೆಯುತ್ತಿರುವ ಕಪ್ಪುವರ್ಣಿಯರ ದಂಗೆ ಮತ್ತಿತರ ಮಹತ್ವದ ವಿಚಾರಗಳ ಬಗ್ಗೆ ಪ್ರಧಾನಿ ಮೋದಿಯವರೊಡನೆ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಮುಂದಿನ ವಾರ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ಗಳನ್ನು ರವಾನಿಸುವುದಾಗಿಯೂ ತಿಳಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ರೊಡನೆ ನಡೆದ ದೂರವಾಣಿ ಮಾತುಕತೆ ಕುರಿತಾಗಿ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ವಿಷಯವನ್ನು ತಿಳಿಸಿದ್ದರು








