Mandya | ಮಂಡ್ಯದಲ್ಲಿ ಧಾರಾಕಾರ ಮಳೆ : ಸೇತುವೆ ಮುಳುಗಡೆ
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯಲ್ಲಿ ಹಲವು ಕೆರೆಗಳು ತುಂಬಿ ತುಳುಕುತ್ತಿವೆ.
ಹೀಗಾಗಿ ಬಳ್ಳೆಕೆರೆ – ನೇರಲಕೆರೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. Heavy rains in Mandya saaksha tv
ಸೇತುವೆ ಮುಳುಗಡೆ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕ ಸಂಚಾರಕ್ಕೆ ತಡೆ ಹಿಡಿಯಲಾಗಿದೆ. Heavy rains in Mandya saaksha tv
ಇತ್ತ ನೀರಾವರಿ ಇಲಾಖೆ ವಿರಿಜಾ ನಾಲೆಯನ್ನು ಅಭಿವೃದ್ದಿಪಡಿಸದಿರುವ ಕಾರಣ, ಜಮೀನಿಗೆ ನಾಲೆ ನೀರು ನುಗ್ಗಿದೆ.

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಜಮೀನುಗಳು ಮುಳಗಡೆಯಾಗಿವೆ.
ಸುಮಾರು 50 ಎಕರೆಯಷ್ಟು ಜಮೀನು ಜಲಾವೃತಗೊಂಡಿದೆ.
20 ದಿನಗಳ ಹಿಂದೆಯಷ್ಟೇ ರೈತರು ಭತ್ತ ನಾಟಿ ಮಾಡಿದ್ದರು.
ಇದೀಗ ಜಮೀನು ಜಲಾವೃತದಿಂದ ಭತ್ತದ ಬೆಳೆ ನಾಶವಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ನಾಲೆ ಮೇಲೆಯ ಏರಿ ಮೇಲಿಂದ ನೀರು ಹರಿಯುತ್ತಿದ್ದು, ರೈತರ ಆಕ್ರೋಶ ಹೊರಹಾಕಿದ್ದಾರೆ. Heavy rains in Mandya








