Baburao Chinchansur | ಪ್ರಿಯಾಂಕ್ ಖರ್ಗೆ ಪಾಪದ ಕೊಡ ತುಂಬಿದೆ
ಕಲಬುರಗಿ : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪಾಪದ ಕೊಡ ತುಂಬಿದ್ದು, ಅದು ಠಬ್ ಅಂತಾ ಒಡೆದು ಹೋಗುತ್ತದೆ ಎಂದು ಎಂ ಎಲ್ ಸಿ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಇದು ಲಂಚ ಮತ್ತು ಮಂಚ ಸರ್ಕಾರ ಎಂದು ಗುಡುಗಿದ್ದರು. ಇದಕ್ಕೆ ರಾಜ್ಯ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ.
ಇದೀಗ ಪ್ರಿಯಾಂಕ್ ಖರ್ಗೆ ವಿರುದ್ಧದ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದ್ದು, ಪ್ರಿಯಾಂಕ್ ಖರ್ಗೆ ಪಾಪದ ಕೊಡ ತುಂಬಿದೆ..

ಅದು ಠಬ್ ಅಂತ ಒಡೆಯುತ್ತೆ. ಪ್ರಿಯಾಂಕ್ ಖರ್ಗೆ ಈಗ ಮನೆಗೆ ಹೋಗುವ ಕಾಲ ಬಂದಿದೆ.
ಈ ಸಲ ಪ್ರಿಯಾಂಕ್ ಖರ್ಗೆ ಮನೆಗೆ ಹೋಗೇ ಹೋಗ್ತಾನೆ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.
ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಹಾವು ಮುಂಗುಸಿ ತರ ಇದ್ದಾರೆ.
ಮುಂದಿನ 20 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದೇ ಇಲ್ಲ ಎಂದು ಚಿತ್ತಾಪುರದಲ್ಲಿ MLC ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ








