BSYಗೆ ವಿಶೇಷ ಸ್ಥಾನಮಾನ : ಈಶ್ವರಪ್ಪ ಹೇಳಿದ್ದೇನು ?
ಶಿವಮೊಗ್ಗ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷ ವಿಶೇಷ ಸ್ಥಾನಮಾನ ನೀಡಿದೆ. ಇಡೀ ರಾಜ್ಯದ ಪಕ್ಷದ ಕಾರ್ಯಕರ್ತರಿಗೆ ಖುಷಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನೇತೃತ್ವದಲ್ಲಿ ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆ ಅಂತಾ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಆಸೆ ಈಡೇರುತ್ತೆ ಅನ್ನೋ ಭರವಸೆ ನನಗೂ ಇದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿ, ರಾಜ್ಯಾಧ್ಯಕ್ಷರು ಯಾರು ಇರಬೇಕು, ಯಾರು ಬೇಡ ಅಂತ ರಾಷ್ಟ್ರೀಯ ನಾಯಕರು ನಿರ್ಧರಿಸ್ತಾರೆ.
ನಮಗೆ ನಿಮಗೆ ಯಾಕೆ ಚಿಂತೆ ? ಅವರೇನು ತೀರ್ಮಾನ ಕೈಗೊಳ್ತಾರೆ ಅದಕ್ಕೆ ನಾವೆಲ್ಲ ಬದ್ಧವಾಗಿರುತ್ತೇವೆ ಎಂದಿದ್ದಾರೆ.
ಚಿತ್ರದುರ್ಗದ ಮುರುಘಾಮಠದ ಶ್ರೀ ಪ್ರಕರಣದ ಬಗ್ಗೆ ಮಾತನಾಡಿ, ಚಿತ್ರದುರ್ಗದ ಮುರುಘಾಮಠ ಇಡೀ ನಾಡಿಗೆ ಪ್ರಖ್ಯಾತಿ, ಆದರೆ ಸುದ್ದಿ ಕೇಳಿ ಬೇಸರವಾಗಿದೆ.
ಇದೊಂದು ಅನಿಷ್ಟ ಸುದ್ದಿ. ಇದು ಸುಳ್ಳಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ, ತನಿಖೆ ನಡೆಯುತ್ತಿದೆ, ವರದಿ ಬಂದ ನಂತರ ಏನಂತ ಹೇಳಬಹುದು ಎಂದಿದ್ದಾರೆ.








