ಗೌತಮ್ ಅದಾನಿ ಈಗ ವಿಶ್ವದ 3 ನೇ ಶ್ರೀಮಂತ ವ್ಯಕ್ತಿ….
ಅದಾನಿ ಗ್ರೂಪ್ ಅಧ್ಯಕ್ಷ ಉದ್ಯಮಿ ಗೌತಮ್ ಅದಾನಿ ವಿಶ್ವದ 3 ಶ್ರೀಮಂತ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ. ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನ ಹಿಂದಿಕ್ಕಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ತಿಳಿದುಬಂದಿದೆ.
137.4 ಶತಕೋಟಿ ಒಟ್ಟು ನಿವ್ವಳ ಅಮೆರಿಕನ್ ಡಾಲರ್ ಮೌಲ್ಯದೊಂದಿಗೆ, 60 ವರ್ಷದ ಗೌತಮ್ ಅದಾನಿ ಲೂಯಿ ವಿಟಾನ್ ಅಧ್ಯಕ್ಷ ಅರ್ನಾಲ್ಟ್ ಅವರ ಸಂಪತ್ತನ್ನ ಮೀರಿಸಿದ್ದಾರೆ. ಈಗ ವಿಶ್ವದ ಶ್ರೀಮಂತರ ಪಟ್ಜಿಯಲ್ಲಿ ಉದ್ಯಮಿ ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರಿಗಿಂತ 1 ಹೆಜ್ಜೆ ಹಿಂದಿದ್ದಾರೆ.
ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ, ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಒಟ್ಟು USD 91.9 ಶತಕೋಟಿ ಮೌಲ್ಯದೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ. ಏಷ್ಯಾದ ವ್ಯಕ್ತಿಯೊಬ್ಬರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರರಲ್ಲಿ ಪ್ರವೇಶಿಸಿದ್ದು ಇದೇ ಮೊದಲು.
ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯವು ಪ್ರಸ್ತುತ USD 251 ಶತಕೋಟಿ ಮತ್ತು USD 153 ಬಿಲಿಯನ್ .
ಅದಾನಿ ಅವರು ಮೊದಲ ತಲೆಮಾರಿನ ಉದ್ಯಮಿಯಾಗಿದ್ದಾರೆ. ಅದಾನಿ ಗ್ರೂಪ್ ಶಕ್ತಿ, ಬಂದರುಗಳು ಮತ್ತು ಲಾಜಿಸ್ಟಿಕ್ಸ್, ಗಣಿಗಾರಿಕೆ ಮತ್ತು ಸಂಪನ್ಮೂಲಗಳು, ಅನಿಲ, ರಕ್ಷಣಾ ಮತ್ತು ಏರೋಸ್ಪೇಸ್ ಮತ್ತು ವಿಮಾನ ನಿಲ್ದಾಣಗಳಂತಹ ವ್ಯವಹಾರಗಳನ್ನ ನಡೆಸುತ್ತಿದೆ.








