Heavy Rain | ಹಾವೇರಿಯಲ್ಲಿ ರೈತರ ನಿದ್ದೆಗೆಡಿಸಿದ ಮೇಘ ಸ್ಫೋಟ
ಹಾವೇರಿ : ರಾಜ್ಯದೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ.
ಆದ್ರೆ ಈ ಸಂಭ್ರಮಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ರಾಜ್ಯದಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಇದರಿಂದ ಸಾಕಷ್ಟು ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಕಂಗಾಲಾಗಿದ್ದಾರೆ.
ಇತ್ತ ಹಾವೇರಿಯಲ್ಲಿ ಮಳೆರಾಯ ರೈತರ ನಿದ್ದೆಗೆಡಿಸಿದ್ದಾನೆ.
ನಿನ್ನೆ ರಾತ್ರಿ ಹಾವೇರಿಯಲ್ಲಿ ಭಾರಿಯಾಗಿದ್ದು, ಸೌತೆಕಾಯಿ, ಹಿರೇಕಾಯಿ ಸೇರಿದಂತೆ ಇತರೆ ಬೆಳೆ ನೀರುಪಾಲಾಗಿದೆ.

ಜಮೀನಿಗೆ ನೀರು ನುಗ್ಗಿದ ಪರಿಣಾಮ ಜಮೀನುಗಳು ನದಿಗಳಂತಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಶಿವಪ್ಪ ಎಂಬುವವರಿಗೆ ಸೇರಿದ ಬೆಳೆಗಳು ನಾಶವಾಗಿವೆ.
ಶಿವಪ್ಪ ಎಂಬುವವರು ತಮ್ಮ ಮೂರು ಎಕರೆ ಹೊಲದಲ್ಲಿ ಸೌತೆಕಾಯಿ,ಹೀರೇಕಾಯಿ ಬೆಳೆದಿದ್ದರು.
ಇದೀಗ ಮಳೆಯಿಂದಾಗಿ ಬೆಳೆ ನೀರುಪಾಲಾಗಿದೆ. ಹೀಗಾಗಿ ರೈತ ವಿಡಿಯೋ ಮಾಡಿ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ. Heavy Rain in Haveri karnataka








