Water Melon Health tips
ಕಲ್ಲಂಗಡಿ ಹಣ್ಣು ಬೇಸಿಗೆಯ ಅಮೃತ .
ಆಹಾ..! ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದಂತೆ ಯಾರು ತಾನೆ ಸುಮ್ಮನಿರಲು ಸಾಧ್ಯ,
ಮನಸ್ಸಿನಲ್ಲಿ ನೆನೆಯುತ್ತಿದ್ದಂತೆ ಆಸ್ವಾದಿಸುತ್ತೇವೆ .ಒಂದಾನೊಂದು ಕಾಲದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಈ ಹಣ್ಣು ನೋಡಬಹುದು ಇತ್ತು.
ಆದರೆ ಈಗ ಕಾಲ ಬದಲಾದಂತೆ ವ್ಯವಸಾಯದ ವಿಧಾನ ಕೂಡ ಬದಲಾಗಿದೆ ಹಾಗಾಗಿ ನೀವು ಯಾವಾಗ ಬೇಕೆನಿಸಿದರು ಈ ಹಣ್ಣನ್ನು ಸವಿಯಬಹುದು, ಆದರೆ ನಿಮಗೆ ಬಲು ರುಚಿಯಾದ ಸಿಹಿಯಾದ ಕೆಂಪು ಬಣ್ಣವಿರುವ ಬಾಯಲ್ಲಿಡುತ್ತಿದ್ದಂತೆ ಕರಗಿ ಹೋಗುವಂತಹ ಉತ್ತಮವಾದ ಹಣ್ಣು ಬೇಕಿದ್ದರೆ ಬೇಸಿಗೆಯವರೆಗೂ ನೀವು ಕಾಯಲೇ ಬೇಕಾಗುತ್ತದೆ.
ಹಣ್ಣು ಎಂದ ತಕ್ಷಣವೇ ರುಚಿಯೊಂದಿದ್ದರೆ ಸಾಕೇ…? ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಆ ರುಚಿಯಾದ ಹಣ್ಣುಗಳು ಉಪಯುಕ್ತ ಗುಣಗಳನ್ನು ಹೊಂದುವುದು ಮುಖ್ಯವಲ್ಲವೇ, ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಲ್ಲವೇ .
ಕಲ್ಲಂಗಡಿ ಹಣ್ಣು ‘ಕುಕುಬಬೀಟೇಸಿ’ ಎಂಬ ಹಣ್ಣಿನ ಕುಟುಂಬಕ್ಕೆ ಸೇರಿದ್ದು ಇದನ್ನು ವೈಜ್ಞಾನಿಕವಾಗಿ ನಿಟ್ರುಲಿಸೆಲನಾಟಸ್ ಎಂಬುದಾಗಿದೆ. ಇದು ಆಫ್ರಿಕಾ ದೇಶದಲ್ಲಿ ಉದ್ಭವವಾಗಿದ್ದು ,ಪ್ರಥಮವಾಗಿ ಈಜಿಪ್ಟ್ನಲ್ಲಿ ಬೆಳೆದಿದ್ದಾಗಿದೆ .ಎಂದು ಚರಿತ್ರೆಯ ಪುಸ್ತಕಗಳಲ್ಲಿ ತಿಳಿಸಲಾಗಿದೆ .
ಇದರಲ್ಲಿ ‘ವಿಟಮಿನ್ A’ ಮತ್ತು ‘ವಿಟಮಿನ್ ಸಿ’ , ‘ವಿಟಮಿನ್ ಬಿ’ ಮತ್ತು ‘ವಿಟಮಿನ್ ಬಿ6’ ಗಳನ್ನು ಕಾಣಬಹುದಾಗಿದೆ.
ಈ ಹಣ್ಣಿನಲ್ಲಿ ‘ಲೈಕೋಪೀನ್ ‘ ಎಂಬ ಮುಖ್ಯ ಆಂಟಿ ಆಕ್ಸಿಡೆಂಟ್ ಈ ಹಣ್ಣಿನಲ್ಲಿದ್ದು ಇದು ಕ್ಯಾನ್ಸರ್ ನಂತಹ ರೋಗಗಳನ್ನು ನಿವಾರಣೆ ಮಾಡುವುದೆಂದು ಸಂಶೋಧನೆಗಳು ದೃಢಪಡಿಸಿದೆ .
ಕ್ಯಾನ್ಸರ್ ರೋಗಕ್ಕೆ ಅಷ್ಟೇ ಅಲ್ಲದೆ ಬೊಜ್ಜು ಡಯಾಬಿಟಿಸ್ ಕಡಿಮೆ ಮಾಡುವಲ್ಲಿ ತುಂಬಾ ಉಪಯುಕ್ತತೆಯನ್ನು ಪಡೆದುಕೊಂಡಿದೆ.
ಮತ್ತು ಇದಲ್ಲದೆ ಅಸ್ತಮಾ ಅದ್ರೈಟಿಸಿ ಅಧೀಕ ರಕ್ತದೋತ್ತಡ ದಂತಹ ರೋಗಗಳಿಂದ ಬಳಲುವಂತವರು ಕೂಡಾ ತೆಗೆದು ಕೋಳ್ಳಬಹುದು .
ಆರೋಗ್ಯವೇ ಭಾಗ್ಯ ಎಂಬ ನುಡಿಯ ಅನ್ವಯ ಹಣ್ಣುಗಳು ನಮ್ಮ ದೇಹವನ್ನು ಆರೋಗ್ಯ ಯುತವಾಗಿಡಲು ಈ ಹಣ್ಣುಗಳು ಬಹಳ ಮುಖ್ಯ ವಾಗಿದೆ.
ಇಂತಹ ಪ್ರಕೃತಿಯ ಸೌಭಾಗ್ಯದ ಹಣ್ಣುಗಳನ್ನು ಕ್ಲಿಣಿಸದೆ ನಾವೆಲ್ಲರೂ ಸೇವಿಸಿ ಆರೋಗ್ಯಯುತವಾಗಿರೋಣ …
Ranjeet.m.y