ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಸಂಜು ಭಂಡಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.. ಬೆಳಗಾವಿ ಮೂಲದ ಸಂಜು ಭಂಡಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ..
ಗೋಕಾಕಿನ 12 ನೇ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ಈ ಆದೇಶ ಹೊರಡಿಸಿದೆ.. ಪರೀಕ್ಷಾರ್ಥಿಗಳಿಂದ ಹಣ ಪಡೆದು ಅಕ್ರಮ ನಡೆಸಲು ಡಿವೈಸ್ ನೀಡಿದ್ದ ಸಂಜು ಭಂಡಾರಿ
ಅಕ್ರಮ ಸಂಬಂಧ ಪರೀಕ್ಷಾರ್ಥಿಗಳು ಸೇರಿ 12 ಜನರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಸಂಜು ಬಂಡಾರಿ ಹೊರರಾಜ್ಯದಲ್ಲಿ ತಲೆಮರಿಸಿಕೊಂಡಿದ್ದು , ಆತನ ಪತ್ತೆಗೆ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದೆ..








