ದಯವಿಟ್ಟು…ವಿರಾಟ್ ಕೊಹ್ಲಿ ಆಟ ಆಡುವಾಗ ಏನನ್ನು ಹೇಳಬೇಡಿ… !
ವಿರಾಟ್ ಕೊಹ್ಲಿ… ಮೈದಾನಕ್ಕಿಳಿದಾಗ ವಿರಾಟ್ ವರ್ತನೆ ರಕ್ಕಸ ಪ್ರವೃತ್ತಿಯದ್ದಾಗಿರುತ್ತೆ. ಆಕ್ರಮಣಕಾರಿ ಪ್ರವೃತ್ತಿ, ಗೆಲ್ಲಬೇಕು ಅನ್ನೋ ಜಿದ್ದು ಹೀಗೆ ವಿರಾಟ್ ವರ್ತನೆಯನ್ನು ಅರಿತುಕೊಳ್ಳುವುದು ಕಷ್ಟ. ತಂಡ ಯಾವುದೇ ಇರಲಿ, ಎದುರಾಳಿ ಯಾವುದೇ ಬೌಲರ್ ಇರಲಿ.. ವಿರಾಟ್ ಬ್ಯಾಟ್ ಮಾತ್ರ ಖಡ್ಗದಂತೆ ಝಳಪಿಸುತ್ತಿರುತ್ತದೆ. ಅಷ್ಟೇ ಅಲ್ಲ ತನ್ನನ್ನು ಯಾರನ್ನು ಕೆಣಕಿದ್ರೆ ಸಾಕು.. ವಿರಾಟ್ ತನ್ನ ವಿಶ್ವ ರೂಪವನ್ನೇ ಪ್ರದರ್ಶಿಸುತ್ತಾರೆ. ಇಂತಹ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ.
ಇದೀಗ ಆಸ್ಟ್ರೇಲಿಯಾ ಡೀನ್ ಜೋನ್ಸ್ ಅವರು ವಿರಾಟ್ ಕೊಹ್ಲಿಯವರ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯ ಜೊತೆಗೆ ಎಂ.ಎಸ್. ಧೋನಿಯ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಕರಡಿಯನ್ನು ಕೆಣಕಿದ ಹಾಗೇ ವಿರಾಟ್ ಕೊಹ್ಲಿಯವರನ್ನ ಕೆಣಕಲು ಹೋಗಬೇಡಿ. ಯಾಕಂದ್ರೆ ವಿರಾಟ್ ಮುಖಾಮುಖಿ ಸ್ಪರ್ಧೆಯನ್ನು ತುಂಬಾನೇ ಇಷ್ಟಪಡುತ್ತಾರೆ. ಹಾಗಾಗಿ ವಿರಾಟ್ ಕೊಹ್ಲಿಯವರಿಗೆ ಎದುರಾಳಿ ತಂಡಗಳ ಆಟಗಾರರು ಏನನ್ನು ಹೇಳೋಕೆ ಹೋಗಬೇಡಿ ಅಂತ ಹೇಳಿದ್ದಾರೆ.
ವಿರಾಟ್ ಕೊಹ್ಲಿಗೆ ಯಾಕೆ ಏನನ್ನು ಹೇಳೋಕೆ ಹೋಗಬೇಡಿ ಅಂತ ಎಂಬುದನ್ನು ಡೀನ್ ಜೋನ್ಸ್ ಉದಾಹರಣೆ
ಸಹಿತವಾಗಿ ಹೇಳಿದ್ದಾರೆ. ನಾವು ವಿವಿ ರಿಚಡ್ರ್ಸ್ ಬ್ಯಾಟಿಂಗ್ ಬಂದಾಗ, ಜಾವೇದ್ ಮಿಯಾಂದಾದ್ ಬ್ಯಾಟಿಂಗ್‍ಗೆ ಬಂದಾಗ, ಮಾರ್ಟಿನ್ ಕ್ರೋವ್ ಬ್ಯಾಟಿಂಗ್‍ಗೆ ಬಂದಾಗ ಶಾಂತವಾಗಿರುತ್ತಿದ್ದೇವು. ಅವರಿಗೆ ಏನನ್ನು ಹೇಳಲು ಹೋಗುತ್ತಿರಲಿಲ್ಲ. ಯಾಕಂದ್ರೆ ಪಿಚ್ ಉತ್ತಮವಾಗಿ ಸ್ಪಂದಿಸದೇ ಇದ್ದಾಗ, ಬ್ಯಾಟಿಂಗ್‍ಗೆ ಆಹ್ಲಾದಾಕರವಾದ ವಾತಾವರಣ ಇಲ್ಲದೆ ಇದ್ದಾಗ ಯಾರಾದ್ರೂ ಸಡನ್ ಆಗಿ ಏನಾದ್ರೂ ಹೇಳಿದ್ರೆ ಅವರ ಕಿವಿ ನೆಟ್ಟಗಾಗುತ್ತದೆ. ಆಗ ನೀವು ಏನಾದ್ರೂ ಹೇಳಿದ್ದೀರಾ ಅಂತ ಅವರು ಮರು ಪ್ರಶ್ನೆ ಕೇಳುತ್ತಾರೆ. ಯಾಕಂದ್ರೆ ಅವರು ಮುಖಾಮುಖಿಯಾಗುವುದನ್ನು ತುಂಬಾನೇ ಇಷ್ಟಪಡುತ್ತಾರೆ ಅಂತ ಡೀನ್ ಜೋನ್ಸ್ ಹೇಳಿದ್ದಾರೆ.
ಹಾಗೇ ಡೀನ್ ಜೋನ್ಸ್ ಅವರು ಮೈಕೆಲ್ ಜೋರ್ಡಾನ್ ಅವರ ದಿ ಲಾಸ್ಟ್ ಡಾನ್ಸ್ ಡಾಕ್ಯುಮೆಂಟರಿಯನ್ನು ಮತ್ತೊಂದು ಉದಾಹರಣೆಯಾಗಿ ತೆಗೆದುಕೊಂಡು ಹೇಳುವುದು ಹೀಗೆ. ಮೈಕೆಲ್ ಜೋರ್ಡಾನ್ ಕೆಳಗೆ ಬಿದ್ದು ಮತ್ತೆ ಸ್ಪರ್ಧೆ ಮಾಡುತ್ತಾನೆ. ಅದೇ ರೀತಿ ಇವರು ಕೂಡ. ಕರಡಿಯನ್ನು ಕೆಣಕಿದಂತೆ. ಅವರು ಪ್ರತಿಸ್ಪರ್ಧೆಯನ್ನು ಇಷ್ಟಪಡುವುದರಿಂದ ಅವರಿಗೆ ನಾವೇ ಉತ್ತೇಜನ ನೀಡುವಂತಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೈಕೆಲ್ ಕ್ಲಾಕ್ ಅವರು, ಐಪಿಎಲ್ ಒಪ್ಪಂದದ ಕಾರಣ ಆಸ್ಟ್ರೇಲಿಯಾ ಆಟಗಾರರಲ್ಲಿ ಆಕ್ರಮಣಕಾರಿ ಪ್ರವೃತ್ತಿ ಕಡಿಮೆಯಾಗಿದೆ ಎಂಬ ಹೇಳಿಕೆಗೂ ಉತ್ತರ ನೀಡಿದ್ದ ಜೋನ್ಸ್, ಇಂಥಾ ಹೇಳಿಕೆಗಳು ಸರಿಯಲ್ಲ. ಇದೇನಿದ್ರೂ ಕೋಚ್ ಹಾಗೂ ಮ್ಯಾನೇಜರ್‍ಗಳು ಹೇಳಬೇಕು. ಐಪಿಎಲ್‍ಗೂ ವಿರಾಟ್‍ಗೂ, ಆಕ್ರಮಣಕಾರಿ ಪ್ರವೃತ್ತಿಗೂ ಯಾವುದೇ ರೀತಿಯ ಸಂಬಂಧಗಳಿಲ್ಲ ಅಂತಾರೆ ಡೀನ್ ಜೋನ್ಸ್.








