India Vs Hong Kong – ಮೊದಲ ಭಾರಿಗೆ ಭಾರತ – ಹಾಂಕಾಂಗ್ T20 ಸೆಣಸಾಟ…
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಗೆಲುವಿನ ನಂತರ ಭಾರತ ಇಂದು ಏಷ್ಯಾ ಕಪ್ ನ ಎರಡನೇ ಏಕದಿನ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಸೆಣಸಲಿದೆ. ಕ್ವಾಲಿಫೈಯರ್‌ನಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದ ನಂತರ ಹಾಂಗ್ ಕಾಂಗ್ ಏಷ್ಯಾಕಪ್‌ನ ಮುಖ್ಯ ಸುತ್ತಿಗೆ ಪ್ರವೇಶ ಪಡೆದಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಮೂಲಗಳ ಪ್ರಕಾರ ಇಂದಿನ ಪಂದ್ಯದಲ್ಲಿ ಹಿಂದಿನ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯೆತೆ ಇದೆ. ಅವರ ಸ್ಥಾನದಲ್ಲಿ ರಿಷಬ್ ಪಂತ್ ಪಡೆಯಬಹುದು. ಅಥವಾ ಆಡುವ ಅವಕಾಶ ಸಿಕ್ಕರೂ ಸಿಕ್ಕರೂ 4 ಓವರ್ ಬೌಲಿಂಗ್ ಮಾಡುವ ಸಾಧ್ಯತೆ ಕಡಿಮೆ.
ಏಷ್ಯಾಕಪ್ ಇತಿಹಾಸದಲ್ಲಿ ಮೂರನೇ ಬಾರಿಗೆ ಭಾರತ-ಹಾಂಕಾಂಗ್ ಪಂದ್ಯ
2008ರಲ್ಲಿ ಮೊದಲ ಬಾರಿಗೆ ಭಾರತ ಮತ್ತು ಹಾಂಕಾಂಗ್ ತಂಡಗಳು ಮುಖಾಮುಖಿಯಾದವು. ಇದಾದ ಬಳಿಕ 2018ರ ಏಷ್ಯಾಕಪ್‌ನ ಎ ಗುಂಪಿನ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು.
ಇನ್ನೂ ಪಿಚ್ ಬಗ್ಗೆ ಮಾತನಾಡುವುದಾದರೆ ಟಾಸ್ ಗೆದ್ದ ತಂಡ ಬಾಸ್ ಆಗುವ ಸಾಧ್ಯತೆ ಇದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ತಂಡಕ್ಕೆ ಪಂದ್ಯ ಸುಲಭವಾಗುತ್ತಿದೆ. ಏಷ್ಯಾಕಪ್‌ನ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಇದು ಸಾಬೀತಾಗಿದೆ.








