Bangalore | ಕುಖ್ಯಾತ ಅಂತರ್ ರಾಜ್ಯ ಕಳ್ಳರ ಬಂಧನ
ಬೆಂಗಳೂರು : ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಬೆಂಗಳೂರು ನಗರದ ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಅಯಾಝ್ ಪಾಷಾ ಅಲಿಯಾಸ್ ಮೌಲ , ಮತಿನ್ ವುದ್ದೀನ್ ಅಲಿಯಾಸ್ ಮತೀನ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ ಒಂದು ಕೋಟಿ ಇಪ್ಪತ್ತು ಲಕ್ಷ ಮೌಲ್ಯದ 9 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರು ದೆಹಲಿ, ಪಂಜಾಬ್, ಹಿಮಾಚಲಪ್ರದೇಶ, ಉತ್ತರ ಪ್ರದೇಶದಲ್ಲಿ ಕಾರುಗಳನ್ನ ಕದ್ದು ಬೆಂಗಳೂರು ನಗರದಲ್ಲಿ ಮಾರಾಟ ಮಾಡ್ತಿದ್ದರು.

ಸದ್ಯ ಆರೋಪಿಗಳಿಂದ ಐದು ಹುಂಡೈ ಕ್ರೇಟಾ, 2 ಟೊಯೋಟೊ ಇನೋವಾ, ಒಂದು ಮಾರುತಿ ಬಲೆನೋ, ಒಂದು ವೋಲ್ಸ್ ವ್ಯಾಗನ್ ಕಾರು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ತನ್ನ ಸಹಚರರಾದ ಸೈಯದ್ ಸಮೀರ್, ಡೆಲ್ಲಿ ಇಮ್ರಾನ್, ತನ್ನು ಅಲಿಯಾಸ್ ತನ್ವೀರ್, ಯಾರಾಬ್ ಜೊತೆ ಸೇರಿ ಬೇರೆ ರಾಜ್ಯದಲ್ಲಿ ಕಾರು ಕದಿಯುತ್ತಿದ್ದರು.
ಸದ್ಯ ಆರೋಪಿಗಳನ್ನ ಬಂಧಿಸಿ ಅಶೋಕ್ ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.








