ಕಾಶ್ಮೀರಿ ಹಿಂದೂಗಳ ಪುನರ್ವಸತಿಗೆ ಬೇಡಿಕೆ – ಕೇಂದ್ರಕ್ಕೆ ಹೋಗಿ ಎಂದ ಸುಪ್ರೀಂ
ಕಾಶ್ಮೀರಿ ಹಿಂದೂಗಳು ಮತ್ತು ಸಿಖ್ಖರ ಪುನರ್ವಸತಿ ಕೋರಿ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
1990 ಮತ್ತು 2003 ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಿಂದೂಗಳು ಮತ್ತು ಸಿಖ್ಖರ ನರಮೇಧ ಮತ್ತು ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕುರಿತು ಎಸ್‌ಐಟಿ ತನಿಖೆಯನ್ನು ‘ವಿ ದಿ ಸಿಟಿಜನ್ಸ್’ ಅರ್ಜಿದಾರರ ಸಂಸ್ಥೆ ಕೋರಿತ್ತು.
ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಸಲ್ಲಿಸುವಂತೆ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿಂದೆ 2017 ರಲ್ಲಿ, ‘ರೂಟ್ಸ್ ಇನ್ ಕಾಶ್ಮೀರ’ ಹೆಸರಿನ ಸಂಘಟನೆಯ ಇದೇ ರೀತಿಯ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. 1990ರ ಹತ್ಯಾಕಾಂಡ ನಡೆದು ಇಷ್ಟು ವರ್ಷಗಳಾದರೂ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
Supreme Court begins hearing an NGO's plea seeking rehabilitation of Kashmiri Hindus, Sikhs. SC directs the petitioner to withdraw the petition and asks the petitioner to make a representation before the Centre. pic.twitter.com/1q0OxM1td2
— ANI (@ANI) September 2, 2022








