KSRTC | ಕೆಎಸ್ ಆರ್ ಟಿಸಿ ಬಸ್ ಪಾಸ್ ಅವಧಿ ವಿಸ್ತರಣೆ
ಕೆಎಸ್ ಆರ್ ಟಿಸಿ ಬಸ್ ಪಾಸ್ ಅವಧಿ ವಿಸ್ತರಣೆ
ಅಕ್ಟೋಬರ್ 31 ರವರೆಗೂ ಬಸ್ ಪಾಸ್ ಸೌಲಭ್ಯ
ಇತರೆ ವಿದ್ಯಾರ್ಥಿಗಳಿಗೆ ಸೆ.30ರವರೆಗೂ ವಿಸ್ತರಣೆ
ಕೊರೊನಾ ಕಾರಣ ತರಗತಿಗಳು ತಡವಾದ ಹಿನ್ನೆಲೆ
ಬೆಂಗಳೂರು : ಕೊರೊನಾ ಸೋಂಕು ಕಾರಣ 2021 – 22 ನೇ ಸಾಲಿನ ಕಾಲೇಜು ತರಗತಿಗಳು ತಡವಾಗಿ ಆರಂಭವಾಗಿದ್ದವು.
ಈ ಕಾರಣದಿಂದಾಗಿ ಅಂತಿಮ ಸೆಮಿಸ್ಟರ್ ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ನಡೆಯಲಿದೆ.
ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 31ವರೆಗೂ, ಇತರೆ ವರ್ಷಗಳ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 30ರವೆರಗೂ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಈ ವಿದ್ಯಾರ್ಥಿಗಳು 2021 – 22ನೇ ಸಾಲಿನ ಬಸ್ ಪಾಸ್ ಮತ್ತು ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿ ತೋರಿಸಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು.
ಜೊತೆಗೆ ಇತರೆ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ನೂತನ ಬಸ್ ಪಾಸ್ ಪಡೆದುಕೊಳ್ಳಲು ಅವಕಾಶ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಅವರ ಬಸ್ ಪಾಸ್ ಸೌಲಭ್ಯವನ್ನು ಸೆಪ್ಟೆಂಬರ್ 30ವರೆಗೂ ವಿಸ್ತರಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.








