Kolar | ಅಕ್ರಮ ಕಸಾಯಿಖಾನೆ ಮೇಲೆ ಖಾಕಿ ದಾಳಿ – ಗೋವುಗಳ ರಕ್ಷಣೆ
ಕೋಲಾರ : ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 20 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಕೋಲಾರ ನಗರದ ರಹಮತ್ ನಗರದಲ್ಲಿ ಆರೀಫ್ ಎಂಬುವರಿಗೆ ಸೇರಿದ ಕಸಾಯಿಖಾನೆ ಇತ್ತು.
ಇದರಲ್ಲಿ 20 ಕ್ಕೂ ಹೆಚ್ಚು ಗೋವುಗಳನ್ನು ಇರಿಸಲಾಗಿತ್ತು.

ಇದರ ಮಾಹಿತಿ ಪಡೆದ ಪೊಲೀಸರು ಕಸಾಯಿಖಾನೆ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಕಸಾಯಿಖಾನೆಯಲ್ಲಿ ನೀರು ಮೇವಿಲ್ಲದೇ ಎರಡು ಹಸುಗಳು ಮೃತಪಟ್ಟಿರುವುದು ಕಂಡುಬಂದಿದೆ.
ಸದ್ಯ ಕಸಾಯಿಖಾನೆ ಮಾಲೀಕ ಆರೀಫ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








