ಐ witness.
A Game Of Police.
ಒಂದು ನಾಡಿನ ಸಾಹಿತ್ಯ ಶ್ರೀಮಂತವಾಗಬೇಕಾದರೆ, ಅಲ್ಲಿಯ ಎಲ್ಲ ಕ್ಷೇತ್ರದ ಜನರು ತಮ್ಮ ಅನುಭವವನ್ನು ದಾಖಲಿಸಬೇಕು ಅನ್ನೋ ಮಾತಿದೆ. ಇದು ಕನ್ನಡದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಭರಪೂರದಿಂದ ಸಾಗಿದೆ. ಬೆಂಗಳೂರು ನಗರ ಕಂಡ ಅತ್ಯಂತ ದಕ್ಷ ಪೊಲೀಸ್ ಅಧಿಕಾರಿಗಳ ಪೈಕಿ ಒಬ್ಬರಾದ ಎಸ್. ಕೆ. ಉಮೇಶ್ ಅವರು ತಮ್ಮ ನಿವೃತ್ತಿಯ ನಂತರ ಬರೆದ ಪುಸ್ತಕ
ಐ witness. ಹೌದು! ಎಸ್ ಕೆ ಉಮೇಶ್ ಅವರು ತಮ್ಮ ಮೂವತ್ತೊಂದು ವರ್ಷಗಳ ಸುದೀರ್ಘ ಸೇವೆಯಲ್ಲಿ ಕಂಡ ನೈಜ್ಯ ಘಟನೆಗಳನ್ನು ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ನಲವತ್ತು ಕಥೆಗಳಿವೆ, ಮತ್ತು ಅವೆಲ್ಲವೂ ವಸ್ತುನಿಷ್ಠ ಕಥೆಗಳಾಗಿವೆ. ಇದು ಕಾದಂಬರಿ ಅಲ್ಲ. ಪುಸ್ತಕವನ್ನು ಎಲ್ಲಿಂದಾದರು ಓದಲು ಶುರುಮಾಡಬಹುದು.
ಒಂದು ಕಥೆಗೆ-ಮತ್ತೊಂದು ಕಥೆ ಸಂಬಂಧವಿಲ್ಲ. ಓದುಗನನ್ನು ಸರಾಗವಾಗಿ ಓದಿಸಿಕೊಂಡು ಹೋಗುವ
ಈ ಪುಸ್ತಕಕ್ಕೆ ಬೆನ್ನುಡಿ ಬರೆದವರು ಬಂಡಾಯ ಕವಿ
ಡಾ!ಸಿದ್ದಲಿಂಗಯ್ಯ. ಈ ಹಿಂದೆಯೂ ಈ ರೀತಿಯ ಹಲವು ಕೃತಿಗಳು ಬಂದಿವೆ. ಉದಾಹರಣೆಗೆ ಹೇಳುವುದಾದರೆ ಟೈಗರ್ ಅಶೋಕ್ ಕುಮಾರ್ ಅವರ ಬುಲೆಟ್ ಸವಾರಿ, ಹುಲಿಯ ನೆನಪುಗಳು, ಪೊಲೀಸ್ ವ್ಹಿಸಲ್. ಬಿ.ಕೆ.ಶಿವರಾಮ್ ಅವರ ಪೊಲೀಸ್ ಕಂಡ ಕಥೆಗಳು. ಡಿ.ವಿ.ಗುರುಪ್ರಸಾದ್ ಅವರ ಅನೇಕ ಕೃತಿಗಳು ಮತ್ತು ಪತ್ರಕರ್ತ ಸಂತೋಷ್ ತಮ್ಮಯ್ಯ ಸೈನ್ಯದ ಕುರಿತು ಬರೆದಿರುವ ಸಮರ ಭೈರವಿ. ಇಂತಹ ಪುಸ್ತಕಗಳು ಕನ್ನಡದಲ್ಲಿ ಇನ್ನೂ ಹೆಚ್ಚೆಚ್ಚು ಹೊರಬರಬೇಕಿದೆ. ಸಮಾಜದಲ್ಲಿ ಹೆಚ್ಚು ಶೋಷಣೆಗೆ ಒಳಗಾಗುವ ಹೆಣ್ಣುಮಕ್ಕಳಿಗೆ ಐ witness ಪುಸ್ತಕ ಒಂದು ಕೈಪಿಡಿ ಇದ್ದಂತೆ ಅಂತಾರೆ ಲೇಖಕ ಎಸ್.ಕೆ.ಉಮೇಶ್. ಸಾಧ್ಯವಾದರೆ ಒಮ್ಮೆ ಓದಿ.







