ಹೊಸದಿಲ್ಲಿ, ಜೂನ್ 4: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪಿಂಚಣಿದಾರರಿಗೆ 868 ಕೋಟಿ ರೂ. ಪಿಂಚಣಿ ಮತ್ತು 105 ಕೋಟಿ ರೂ. ಪಿಂಚಣಿಯನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ಭರವಸೆ ನೀಡಿದೆ
ಭವಿಷ್ಯ ನಿಧಿ ಸಂಸ್ಥೆಯು ಕೊರೊನಾ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದೆ.
ಇಪಿಎಫ್‌ಒ ಆದ್ಯತೆಯ ಮೇರೆಗೆ ಹಣ ವಾಪಸಾತಿ ಹಕ್ಕುಗಳ ಅರ್ಜಿಯನ್ನು ಇತ್ಯರ್ಥಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ವಾಪಸಾತಿ( ಕ್ಲೈಮ್) ಗಳಿಗಾಗಿ ಅರ್ಜಿ ಸಲ್ಲಿಸಿದ್ದು ಅದು ಇಲ್ಲಿಯವರೆಗೆ ಇತ್ಯರ್ಥವಾಗದೇ ಇದ್ದ ಪಕ್ಷದಲ್ಲಿ ತ್ವರಿತ ಇತ್ಯರ್ಥಕ್ಕೆ ಕೋವಿಡ್ 19 ಸಂಬಂಧಿತ ಹಕ್ಕುಗಳ ಪ್ರಕ್ರಿಯೆಯನ್ನು ಬಳಸಿಕೊಳ್ಳಬಹುದಾಗಿದೆ ಎನ್ನಲಾಗಿದೆ.
72 ಗಂಟೆಗಳ ಒಳಗೆ ಆನ್ ಲೈನ್ ಇಪಿಎಫ್ ವಾಪಸಾತಿ ಹಕ್ಕುಗಳನ್ನು ಸಲ್ಲಿಸಬಹುದಾಗಿದ್ದು, ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಸಂಪೂರ್ಣವಾಗಿ ಕೆವೈಸಿ ಕಂಪ್ಲೇಂಟ್ ಇಲ್ಲದ ಕ್ಲೇಮುಗಳಿಗೆ ಸ್ವಲ್ಪ ಸಮಯಾವಕಾಶ ಬೇಕಿದ್ದು, 3 ದಿನದಲ್ಲಿ ಕ್ಲೈಂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ನಂತರ ವಾಪಸಾತಿ ಮೊತ್ತವನ್ನು ಇಪಿಎಫ್‌ಒ, ಬ್ಯಾಂಕಿಗೆ ಜಮಾ ಮಾಡಲು ಚೆಕ್ ಅನ್ನು ಕಳುಹಿಸಲಾಗುವುದು.
ಬ್ಯಾಂಕ್ ಗಳು ಆ ಮೊತ್ತವನ್ನು ಚಂದಾದಾರರ ಖಾತೆಯಲ್ಲಿ ಠೇವಣಿ ಇಡಲಿದ್ದು, 1 ರಿಂದ 3 ದಿನಗಳ ಅವಧಿಯಲ್ಲಿ ಹಣವನ್ನು ಪಡೆಯಬಹುದಾಗಿದೆ.
ಕೊರೊನಾ ಸಂಬಂಧಿತ ಇಪಿಎಫ್ ವಾಪಸಾತಿಗಳಲ್ಲಿ ಮನೆ ನಿರ್ಮಾಣ, ನಿರುದ್ಯೋಗ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತು, ಉನ್ನತ ಶಿಕ್ಷಣ ಮೊದಲಾದ ಕಾರಣಗಳಿಗೆ ಹಣ ಪಡೆಯಬಹುದಾಗಿದೆ.
ಶೇಕಡ 75 ರಷ್ಟು ಭವಿಷ್ಯನಿಧಿ ಬಾಕಿ ಅಥವಾ ಮೂಲ ವೇತನ ಮತ್ತು ಮೂರು ತಿಂಗಳವರೆಗಿನ ಡಿಎಯಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ವಾಪಸಾತಿ ಮಾಡಬಹುದಾಗಿದೆ.
ಸ್ಕ್ಯಾನ್ ಮಾಡಿದ ಬ್ಯಾಂಕ್ ಖಾತೆಯ ಚೆಕ್ ಹೊರತು ಪಡಿಸಿ ಬೇರೆ ಯಾವುದೇ ದಾಖಲಾತಿಯ ಅಗತ್ಯವಿಲ್ಲ.
ಆನ್ ಲೈನ್ ನಲ್ಲಿ ಇಪಿಎಫ್ ಗೆ ಅರ್ಜಿ ಸಲ್ಲಿಸುವ ವಿಧಾನ
ಮೊದಲು ಚಂದಾದಾರರು ಇಪಿಎಫ್ ನ ಏಕೀಕೃತ ಪೋರ್ಟಲ್ https://www.epfindia.gov.in/ ಗೆ ಲಾಗಿನ್ ಆಗಬೇಕಿದೆ.
ಆನ್ ಲೈನ್ ಸೇವೆಗಳಿಗೆ ಹೋಗಿ ಫಾರ್ಮ್ ನಂಬರ್ 31 ಆಯ್ಕೆ ಮಾಡಿಕೊಳ್ಳಬೇಕು.
ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಿ. ಆನ್ ಲೈನ್ ಕ್ಲೈಮ್ ಗಾಗಿ ಮುಂದುವರೆಯಿರಿ ಕ್ಲಿಕ್ ಮಾಡಬೇಕು.
ಡ್ರಾಪ್-ಡೌನ್ ಮೆನುನಿಂದ ಉದ್ದೇಶ ಸಾಂಕ್ರಾಮಿಕ ರೋಗ ಕೊರೋನಾ ಎಂದು ಆಯ್ಕೆಮಾಡಬೇಕು
ಅಗತ್ಯವಿರುವ ಮೊತ್ತವನ್ನು ನಮೂದಿಸಿ
ಸ್ಕ್ಯಾನ್ ಮಾಡಿದ ನಕಲು ಪ್ರತಿಯನ್ನು ಅಪ್ಲೋಡ್ ಮಾಡಿ.
ನಿಮ್ಮ ಅಡ್ರೆಸ್ ಅನ್ನು ದಾಖಲಿಸಿ.
ಗೆಟ್ ಆಧಾರ್ ಓಟಿಪಿಯನ್ನು ಕ್ಲಿಕ್ ಮಾಡಿ.
ಆಧಾರ್ ಜೋಡಣೆ ಮಾಡಿರುವ ಮೊಬೈಲ್ ಫೋನ್ ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಸಬ್ಮಿಟ್ ಕೊಡಿ