ADVERTISEMENT
Saturday, May 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಇಪಿಎಫ್ 3 ದಿನದಲ್ಲಿ ಇತ್ಯರ್ಥ-ಆನ್ ಲೈನ್ ನಲ್ಲಿ EPF ಗೆ ಅರ್ಜಿ ಸಲ್ಲಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ

admin by admin
June 4, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹೊಸದಿಲ್ಲಿ, ಜೂನ್ 4: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪಿಂಚಣಿದಾರರಿಗೆ 868 ಕೋಟಿ ರೂ. ಪಿಂಚಣಿ ಮತ್ತು 105 ಕೋಟಿ ರೂ. ಪಿಂಚಣಿಯನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ಭರವಸೆ ನೀಡಿದೆ

ಭವಿಷ್ಯ ನಿಧಿ ಸಂಸ್ಥೆಯು ಕೊರೊನಾ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದೆ.

Related posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

May 23, 2026
‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

May 23, 2026

ಇಪಿಎಫ್‌ಒ ಆದ್ಯತೆಯ ಮೇರೆಗೆ ಹಣ ವಾಪಸಾತಿ ಹಕ್ಕುಗಳ ಅರ್ಜಿಯನ್ನು ಇತ್ಯರ್ಥಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ವಾಪಸಾತಿ( ಕ್ಲೈಮ್) ಗಳಿಗಾಗಿ ಅರ್ಜಿ ಸಲ್ಲಿಸಿದ್ದು ಅದು ಇಲ್ಲಿಯವರೆಗೆ ಇತ್ಯರ್ಥವಾಗದೇ ಇದ್ದ ಪಕ್ಷದಲ್ಲಿ ತ್ವರಿತ ಇತ್ಯರ್ಥಕ್ಕೆ ಕೋವಿಡ್ 19 ಸಂಬಂಧಿತ ಹಕ್ಕುಗಳ ಪ್ರಕ್ರಿಯೆಯನ್ನು ಬಳಸಿಕೊಳ್ಳಬಹುದಾಗಿದೆ ಎನ್ನಲಾಗಿದೆ.

72 ಗಂಟೆಗಳ ಒಳಗೆ ಆನ್ ಲೈನ್ ಇಪಿಎಫ್ ವಾಪಸಾತಿ ಹಕ್ಕುಗಳನ್ನು ಸಲ್ಲಿಸಬಹುದಾಗಿದ್ದು, ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಸಂಪೂರ್ಣವಾಗಿ ಕೆವೈಸಿ ಕಂಪ್ಲೇಂಟ್ ಇಲ್ಲದ ಕ್ಲೇಮುಗಳಿಗೆ ಸ್ವಲ್ಪ ಸಮಯಾವಕಾಶ ಬೇಕಿದ್ದು, 3 ದಿನದಲ್ಲಿ ಕ್ಲೈಂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ನಂತರ ‌ವಾಪಸಾತಿ ಮೊತ್ತವನ್ನು ಇಪಿಎಫ್‌ಒ, ಬ್ಯಾಂಕಿಗೆ ಜಮಾ ಮಾಡಲು ಚೆಕ್ ‌ಅನ್ನು ಕಳುಹಿಸಲಾಗುವುದು.
ಬ್ಯಾಂಕ್ ಗಳು‌ ಆ ಮೊತ್ತವನ್ನು ‌ಚಂದಾದಾರರ ಖಾತೆಯಲ್ಲಿ ಠೇವಣಿ ಇಡಲಿದ್ದು, 1 ರಿಂದ 3 ದಿನಗಳ ಅವಧಿಯಲ್ಲಿ ಹಣವನ್ನು ಪಡೆಯಬಹುದಾಗಿದೆ.
ಕೊರೊನಾ ಸಂಬಂಧಿತ ಇಪಿಎಫ್ ವಾಪಸಾತಿಗಳಲ್ಲಿ ಮನೆ ನಿರ್ಮಾಣ, ನಿರುದ್ಯೋಗ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತು, ಉನ್ನತ ಶಿಕ್ಷಣ ಮೊದಲಾದ ಕಾರಣಗಳಿಗೆ ಹಣ ಪಡೆಯಬಹುದಾಗಿದೆ.
ಶೇಕಡ 75 ರಷ್ಟು ಭವಿಷ್ಯನಿಧಿ ಬಾಕಿ ಅಥವಾ ಮೂಲ ವೇತನ ಮತ್ತು ಮೂರು ತಿಂಗಳವರೆಗಿನ ಡಿಎಯಲ್ಲಿ ಯಾವುದು ಕಡಿಮೆ ‌ಇದೆಯೋ ಅದನ್ನು ವಾಪಸಾತಿ ಮಾಡಬಹುದಾಗಿದೆ. ‌

ಸ್ಕ್ಯಾನ್ ಮಾಡಿದ ಬ್ಯಾಂಕ್ ಖಾತೆಯ ಚೆಕ್ ಹೊರತು ಪಡಿಸಿ ಬೇರೆ ‌ಯಾವುದೇ ದಾಖಲಾತಿಯ ಅಗತ್ಯವಿಲ್ಲ.

ಆನ್ ಲೈನ್ ನಲ್ಲಿ ಇಪಿಎಫ್ ಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲು ಚಂದಾದಾರರು ಇಪಿಎಫ್ ನ ಏಕೀಕೃತ ಪೋರ್ಟಲ್ https://www.epfindia.gov.in/ ಗೆ ಲಾಗಿನ್ ಆಗಬೇಕಿದೆ.

ಆನ್ ಲೈನ್ ಸೇವೆಗಳಿಗೆ ಹೋಗಿ ಫಾರ್ಮ್ ನಂಬರ್ 31 ಆಯ್ಕೆ ಮಾಡಿಕೊಳ್ಳಬೇಕು.

ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಿ. ಆನ್ ಲೈನ್ ಕ್ಲೈಮ್ ಗಾಗಿ ಮುಂದುವರೆಯಿರಿ ಕ್ಲಿಕ್ ಮಾಡಬೇಕು.

ಡ್ರಾಪ್-ಡೌನ್ ಮೆನುನಿಂದ ಉದ್ದೇಶ ಸಾಂಕ್ರಾಮಿಕ ರೋಗ ಕೊರೋನಾ ಎಂದು ಆಯ್ಕೆಮಾಡಬೇಕು

ಅಗತ್ಯವಿರುವ ಮೊತ್ತವನ್ನು ನಮೂದಿಸಿ

ಸ್ಕ್ಯಾನ್ ಮಾಡಿದ ನಕಲು ಪ್ರತಿಯನ್ನು ಅಪ್ಲೋಡ್ ಮಾಡಿ.

ನಿಮ್ಮ ಅಡ್ರೆಸ್ ಅನ್ನು ದಾಖಲಿಸಿ.

ಗೆಟ್ ಆಧಾರ್ ಓಟಿಪಿಯನ್ನು ಕ್ಲಿಕ್ ಮಾಡಿ.

ಆಧಾರ್ ಜೋಡಣೆ ಮಾಡಿರುವ ಮೊಬೈಲ್ ಫೋನ್ ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಸಬ್ಮಿಟ್ ಕೊಡಿ

Tags: Epfpensionprovident fund
ShareTweetSendShare
Join us on:

Related Posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

by Shwetha
May 23, 2026
0

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಸಚಿವಾಕಾಂಕ್ಷಿ ಶಾಸಕರು ಹಾಗೂ ಹಾಲಿ ಸಚಿವರು ದೆಹಲಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್...

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

by Shwetha
May 23, 2026
0

ಸೋಶಿಯಲ್ ಮೀಡಿಯಾದಲ್ಲಿ ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಭಾರೀ ಟ್ರೆಂಡ್ ಸೃಷ್ಟಿಸಿದೆ. ಕೆಲ ಯುವ ವಿಮರ್ಶಕರನ್ನು ಉದ್ದೇಶಿಸಿ CJI ನೀಡಿದ್ದ ‘ಕಾಕ್ರೋಚ್’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ...

ಮಂತ್ರಿ ಆಗೋಕೆ ₹200 ಕೋಟಿಯ ಬೇಡಿಕೆ – ಛಲವಾದಿ ನಾರಾಯಣಸ್ವಾಮಿ ಸ್ಫೋಟಕ ಆರೋಪ

ಮನೆ ನಿರ್ಮಿಸಲು ಜಮೀನು ಪಡೆದು ಸ್ಟೇಡಿಯಂ ಕಟ್ಟುವುದು ಎಷ್ಟು ಸರಿ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

by Shwetha
May 23, 2026
0

ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ...

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

by Shwetha
May 23, 2026
0

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ, ತನ್ನ ಸಚಿವ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯದ ಮಂತ್ರ...

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

by Shwetha
May 23, 2026
0

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram