ಕೊರೋನಾ ಹಾವಳಿಗೆ ಬಲಿಯಾಗಿ ಸಮುದ್ರದಲ್ಲೇ ಬಂಧನಕ್ಕೆ ಒಳಗಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇರುವ ಪೀಡಿತರಿಗೆ ಅಲ್ಲಿನ ಜಪಾನ್ ಸರ್ಕಾರ ಸುಧಾರಿತ ಐಫೋನ್ ಗಳನ್ನು ಉಚಿತವಾಗಿ ನೀಡಿದೆ. ಒಟ್ಟು 3700 ಪ್ರಯಾಣಿಕರು ಹಡಗಿನಲ್ಲಿ ಇದ್ದು, ಅದರಲ್ಲಿ ಸುಮಾರು 2000 ಮಂದಿಗೆ ಐಫೋನ್ ನೀಡಲಾಗಿದೆ. ಕೊರೋನಾ ಪೀಡಿತರಿಂದ ಮಾಹಿತಿಯನ್ನು ಪಡೆಯಲು ಈ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿನ ವೈದ್ಯರೊಂದಿಗೆ ಸಂವಹನ ನಡೆಸಲು ಈ ನಿರ್ಧಾರ ಮಾಡಲಾಗಿದೆ. ಇನ್ನು ತನ್ನದೇ ಆದ ಆ್ಯಪ್ ಒಂದನ್ನು ಸಿದ್ದ ಪಡಿಸಿರುವ ಜಪಾನ್ ಸರ್ಕಾರ ವೈದ್ಯರೊಂದಿಗೆ ಆ್ಯಪ್ ಮೂಲಕ ಸಂಪರ್ಕಿಸಲು ಕೋರಿದೆ. ಸದ್ಯ ಅಲ್ಲಿನ ಆರೋಗ್ಯ ಇಲಾಖೆ ಕೊರೋನಾ ಪೀಡಿತರ ಆರೋಗ್ಯ ಸುಧಾರಣೆಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದೆ.
ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್
ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್ ಒಳಗೊಂಡ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ...








