ಗುರು
ಗುರು ಎಂದರೆ ಯಾರು…?
ಗುರು ಎಂದರೆ ಗುರಿತೊರುವವನಲ್ಲವೆ.
ಗುರುವಿಗೆ ಇನ್ನೊಂದು ಹೆಸರು ಶಿಕ್ಷಕನಲ್ಲವೆ.
ಗುರು , ಶಿಕ್ಷಕನಾದವರ ಕರ್ತವ್ಯ ಕೆಲಸ..
ಅವರನ್ನ ನಂಬಿ ಅವರ ಬಳಿ ವಿದ್ಯೆ ಕಲೆಯಲು ಬಂದವರಿಗೆ ವಿದ್ಯಾದಾನ ನೀಡುವುದಲ್ಲವೆ.
ಆದರೆ ನಾವು ನಮ್ಮ ಪೂರ್ವಜರ ಇತಿಹಾಸ ಮತ್ತು ಇಂದಿನ ದಿನಮಾನಗಳ ಘಟನೆಯನ್ನು ನೋಡಿದರೆ.
ಆಗ ಶಿಕ್ಷಣಕ್ಕಾಗಿ ಬೆರಳು ನೀಡಿದವರನ್ನ ಕಂಡರೆ, ಈಗ ಶಿಕ್ಷಣಕ್ಕಾಗಿ ಹಣ ನೀಡುವವರನ್ನು ಕಾಣುತ್ತೇವೆ.
ಅಂದು ಹೆಮ್ಮೆ. ಸ್ವಾರ್ಥ. ಅಹಂ ನ ರೂಪತಾಳ್ಳಿದ ಶಿಕ್ಷಣ ಇಂದು.. ವ್ಯವಹಾರ. ಹಣ. ದರ್ಪ. ದೌರ್ಜನ್ಯದ ಮುಖವಾಡ ಧರೆಸಿದೆ.
ಏನೆ ಇರಲಿ. ನಮ್ಮ ಜೀವನದಲ್ಲಿ ಗುರುವಿಗೆ ಇರುವ ಗೌರವ ಸ್ಥಾನ ಮಾನ ಎಂದು ಬದಲಾಗದು…
ಗುರು ಯಾರೆ ಆಗಿರಲಿ , ಅವರಿಗೆ ಗೌರವ ನೀಡುವುದು ವಿದ್ಯಾರ್ಥಿಗಳ ಆಧ್ಯ ಕರ್ತವ್ಯವಾಗಿದೆ.
ಅಂದ ಹಾಗೆ ಇಂದು ಏಕೆ…? ಗುರುವಿನ ಬಗ್ಗೆ ಪ್ರಸ್ತಾಪ ಮಾಡುತ್ತಿರುವೆ ಎಂದು ನೀಮ್ಮೆಲ್ಲರಿಗೂ ತಿಳಿದಿರುವ ಹಾಗೆ.
ಇಂದು ಸರ್ವ ಶ್ರೇಷ್ಠ ರಾದ ನಮ್ಮ ಶಿಕ್ಷಕರನ್ನು ಆರಾಧಿಸುವ ದಿನ.. ನಮಗೆ ಶಿಕ್ಷಣ ನೀಡಿದ ಶಿಕ್ಷಕರ ದಿನ.
ಹೌದು ಶಿಕ್ಷಕರ ದಿನಾಚರಣೆ.
ನಾವು ಎಲ್ಲರೂ ಶಿಕ್ಷಕರ ದಿನಾಚರಣೆ ಎಂದರೇ ಕೇವಲ ಶಾಲಾ ಕಾಲೇಜುಗಳಲ್ಲಿ ವಿಜ್ರಂಭಣೆಯಿಂದ ಆಚರಿಸುವ ಒಂದು ಹಬ್ಬ . ಎಂದು ತಿಳಿದು, ಈ ಹಬ್ಬದಲ್ಲಿ ನಮ್ಮೆಲ್ಲರಿಗೂ .ಹಿಡಿ ಚುರುಮುರಿ ,ಕೊಬ್ಬರಿ ಸಿಹಿ , ಹಂಚುವ ದಿನ ಎಂದು ಪರಿಭಾವಿಸಿ ಬಿಟ್ಟಿದ್ದೆವೆ.
ಇದರ ಮಧ್ಯೆ ಗುರುವಿನ ಮಾನ್ಯತೆ ಮರೆತು ಬಿಟ್ಟಿದ್ದೆವೆ.
ಈ ದಿನವನ್ನು ಶ್ರೇಷ್ಠ ವಿದ್ವಾಂಸರಾದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿರಸ್ಮರಣೀಯವಾಗಿ ಅವರ ಇಚ್ಚೆಯಂತೆ.
ನಮಗೆ ನಮ್ಮ ಜೀವನದಲ್ಲಿ ಜೀವನ ಮೌಲ್ಯ ಕಲೆಸಿ ತಿಳಿಸಿ ಕೊಟ್ಟ ನಮ್ಮ ಎಲ್ಲಾ ಗುರುಗಳನ್ನು ನೆನೆಯಲು ಅವರಿಗೆಂದೆ ಮೀಸಲಿರಿಸಿದ ದಿನ.
ನಮಗೆ ಅಕ್ಷರ ಜ್ಞಾನ…ನೀಡಿದ…ಗುರುವಿನ ದಿನ…
ನಮಗೆ ಮೌಲ್ಯಗಳ ಕುರಿತು….ಪಾಠ ಮಾಡಿದ..ಶಿಕ್ಷಕರ ದಿನ…
ತಪ್ಪು ಮಾಡಿದಾಗ..ನಮಗೆ ತಿದ್ದಿ ಬುದ್ದಿ ಹೇಳಿ..
ಕೆಲವು ಬಾರಿ ಶಿಕ್ಷಿಸಿ…ಇನ್ನೂ ಕೆಲವು ಬಾರಿ ಮುದ್ದಿಸಿ…ಬುದ್ದಿ ಹೇಳಿದವರ ದಿನ.
ನಮ್ಮನ ಶಿಲೆಯಾಗಿಸಿದಂತಹ ಶಿಲ್ಪಿಗಳ ಆರಾಧನಾ ದಿನ..
ನಮ್ಮ ಎಲ್ಲ ಗುರುಗಳನ್ನ ನೆನೆದು ಅವರಿಗೆ ಎಷ್ಟು ನಮಿಸಿದರು ಎಷ್ಟು ಚಿರ ರುಣಿಯಾಗಿದ್ದರು ಸಾಲದು.
ಕೆಲವು ಬಾರಿ ಶಿಕ್ಷಕರಲ್ಲಿ ಕೆಲವರು ಬಿಳಿ ಬಟ್ಟೆಯ ಮೇಲೆ ಕಪ್ಪು ಚುಕ್ಕೆಯಂತಿದ್ದರೂ..
ಶಿಕ್ಷಕ ಗೌರವಕ್ಕೆ ವಿರುದ್ದ ದಿಕ್ಕಿನಲ್ಲಿ ಚಲಿಸುವ ವ್ಯವಹಾರಕ್ಕಾಗಿ ಶಿಕ್ಷಕರಾದವರನ್ನ ಹೋರತು ಪಡಿಸಿ.
ನಮಗೆ ತಿದ್ದಿ ಬುದ್ದಿ ಹೇಳಿದವರನ್ನ ಮೇಚ್ಚಿ ನಲಿಯುವ ಈ ದಿನದಂದು
ನಿಮ್ಮೆ ನೆಚ್ಚಿನ ಶಿಕ್ಷಕರೊಂದಿಗ ಭಾವ ಚಿತ್ರದೊಂದಿಗೆ ಅವರ ಬಗ್ಗೆ ಎರಡು ಸಾಲುಗಳನ್ನ ಚಂದವಾಗಿ ಬರೆದು..
ನಿಮ್ಮ ಹೆಸರು ವಿಳಾಸ ದೊಂದಿಗೆ ಶೀಘ್ರವೆ ನಮ್ಮ 8105932560 ಈ ನಂಬರ ಗೆ ಕಳುಹಿಸಿ .
ನಿಮ್ಮ ಸಂತಸವನ್ನು ನಾವು ಖಂಡಿತ ಹಂಚಿಕೋಳ್ಳುತ್ತೇವೆ.