Viral Video: ಚಲಿಸುತ್ತಿದ್ದ ರೈಲ್ವೆ ಹಳಿಗೆ ಬಿದ್ದರು ಪವಾಡ ಸದೃಶವಾಗಿ ಬದುಕಿದ ವ್ಯಕ್ತಿ…
ರೈಲ್ವೆ ಹಳಿಗೆ ಬಿದ್ದ ವ್ಯಕ್ತಿಯೋರ್ವನ ಮೇಲೆ ರೈಲು ಹಾದು ಹೋದರೂ ಪವಾಡ ಸದೃಶವಾಗಿ ತನ್ನ ದೇಹದ ಮೇಲೆ ಒಂದು ಗೀಚು ಕೂಡ ಬೀಳದೆ ಪಾರಾಗಿರುವ ಘಟನೆ ಉತ್ತರಪ್ರದೇಶದ ಇಟಾವಾದಲ್ಲಿರುವ ಭರ್ತನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಪ್ರಯಾಣಿಕರು ವಿಡೀಯೋವನ್ನ ಸೆರೆಹಿಡಿದಿದ್ದು, ಸೋಶೀಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ರೈಲು ಜೋರಾಗಿ ಹಾದು ಹೋಗುವಾಗ ಜನರು ಗುಂಪುಗೂಡಿ ಪ್ಲಾಟ್ ಫ್ಲಾರ್ಮ್ ನಿಂತಿರುವುದನ್ನ ನೋಡಬಹುದು. ರೈಲು ಹೋಗುವಾಗ ವ್ಯಕ್ತಿ ಕಾಣಿಸುವುದಿಲ್ಲ. ರೈಲು ಹೋದ ನಂತ ಟ್ರಾಕ್ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಬರುವುದನ್ನ ಆನಂತರ ನೋಡಬಹುದು.
https://twitter.com/i/status/1567115578946781186
ರೈಲು ದಾಟಿದ ನಂತರ, ಎದ್ದು ನಿಂತ ವ್ಯಕ್ತಿ ತನ್ನನ್ನ ಕಾಪಾಡಿದ್ದಕ್ಕೆ ದೇವರಿಗೆ ಕೈಮುಗಿದು ಧನ್ಯವಾದ ಹೇಳಿರುವುದ ವಿಡಿಯೋದಲ್ಲಿ ನೋಡಬಹುದು. ಆ ವ್ಯಕ್ತಿ ಜೀವಂತವಾಗಿ ಎದ್ದ ನಂತರ ಅಲ್ಲಿದ್ದ ಜನರು ನಿರಾಳಾವಾಗಿ ಹೊರನಡೆದಿದ್ದಾರೆ..








