ಸದ್ಯದ ಸ್ಥಿತಿಯಲ್ಲಿ ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುವುದು ಅಸಾಧ್ಯ – ರಫೆಲ್ ನಡಾಲ್
ಕೋವಿಡ್ 19 ವೈರಸ್‍ನ ಅಟ್ಟಹಾಸದಿಂದ ಇಡೀ ಜಗತ್ತೇ ಸ್ತಬ್ದಗೊಂಡಿದೆ. ದೈನಂದಿನ ಚಟುವಟಿಕೆಗಳನ್ನು ಹೊರತುಪಡಿಸಿ ಇಡೀ ವಿಶ್ವದಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಅದ್ರಲ್ಲೂ ಕಳೆದ ಮಾರ್ಚ್‍ನಿಂದ ಬ್ರಹ್ಮಾಂಡವೇ ಮುಂದೇನು ಎಂಬ ಚಿಂತೆಯಲ್ಲಿದೆ. ಆರ್ಥಿಕವಾಗಿ ಎಲ್ಲಾ ಕ್ಷೇತ್ರಕ್ಕೂ ದೊಡ್ಡ ಹೊಡೆತವನ್ನು ನೀಡಿರುವ ಕೊರೋನಾ ವೈರಸ್ ಜನರನ್ನು ಭಯಭೀತಗೊಳಿಸುತ್ತಿದೆ.
ಹೌದು, ಇದಕ್ಕೆ ಕ್ರೀಡಾ ಕ್ಷೇತ್ರ ಕೂಡ ಹೊರತಾಗಿಲ್ಲ. ಕಳೆದ ಮಾರ್ಚ್‍ನಿಂದಲೇ ಎಲ್ಲಾ ಕ್ರೀಡಾಪಟುಗಳು ಮನೆಯಲ್ಲಿ ಕೂತಿದ್ದಾರೆ. ಯಾವುದೇ ಟೂರ್ನಿಗಳು ಕೂಡ ನಡೆಯುತ್ತಿಲ್ಲ. ಕೆಲವೊಂದು ದೇಶಗಳಲ್ಲಿ ಕ್ರೀಡಾಪಟುಗಳು ಅಭ್ಯಾಸದಲ್ಲಿ ನಿರತರಾಗಿದ್ದರೂ ಟೂರ್ನಿಗಳು ನಡೆಯುತ್ತವೆ ಎಂಬುದನ್ನು ಈಗಲೇ ನಿಖರವಾಗಿ ಹೇಳುವ ಹಾಗಿಲ್ಲ. ಅಂದ ಹಾಗೇ ಕ್ರೀಡಾ ರಂಗದಲ್ಲಿ ಕೆಲವೊಂದು ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಟೂರ್ನಿಗಳಿವೆ. ಅದ್ರಲ್ಲೂ ಟೆನಿಸ್ ಕೂಡ ಒಂದು. ವಿಶ್ವ ಟೆನಿಸ್‍ನಲ್ಲಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳು ತನ್ನದೇ ಆದ ಇತಿಹಾಸವನ್ನೇ ಹೊಂದಿವೆ.
ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್. ಈ ನಾಲ್ಕರಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿ ನಡೆದಿದೆ. ಆ ನಂತರ ಕೊರೋನಾ ವೈರಸ್ ನಿಂದಾಗಿ ಫ್ರೆಂಚ್ ಓಪನ್ ಮೇ ಬದಲು ಸೆಪ್ಟಂಬರ್‍ಗೆ ಮುಂದೂಡಲಾಗಿದೆ. ಇನ್ನು ವಿಂಬಲ್ಡನ್ ಟೂರ್ನಿ ರದ್ದುಗೊಂಡಿವೆ. ಅದ್ರಲ್ಲೂ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಕಳೆದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ರದ್ದುಗೊಂಡಿದೆ. ಈಗ ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಾಗಿರುವ ಯುಎಸ್ ಓಪನ್ ಟೂರ್ನಿಯಾದ್ರೂ ನಡೆಯುತ್ತಾ ? ಈ ಪ್ರಶ್ನೆಗೂ ಉತ್ತರವಿಲ್ಲ. ಯಾಕಂದ್ರೆ ಕೋವಿಡ್-19 ಭಯ
ಇನ್ನೊಂದೆಡೆ ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ಲಘುವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಆದ್ರೆ ಕಳೆದ ಎರಡು ತಿಂಗಳುಗಳಿಂದ ನಡಾಲ್ ಕೂಡ ಟೆನಿಸ್ ರಾಕೇಟ್ ಕೈಯಲ್ಲಿ ಹಿಡಿದಿರಲಿಲ್ಲ. ಇದೀಗ ಫಿಟ್‍ನೆಸ್ ಜೊತೆಗೆ ಟೆನಿಸ್ ಕೂಡ ಆಡುತ್ತಿದ್ದಾರೆ. ಆದ್ರೆ ಪ್ರತಿದಿನ ಆಡುತ್ತಿಲ್ಲ. ಒಂದು ದಿನ ಬಿಟ್ಟು ಒಂದು ದಿನ ಹೀಗೆ ತನ್ನ ಅಭ್ಯಾಸವನ್ನು ಶುರು ಮಾಡಿಕೊಂಡಿದ್ದಾರೆ.
ಆದ್ರೆ ರಫೆಲ್ ನಡಾಲ್ ಅವರಿಗೆ ಮುಂದಿನ ಯುಎಸ್ ಓಪನ್ ಟೂರ್ನಿ ನಡೆಯುತ್ತಾ ಅನ್ನೋ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಲೈವ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಈ ಪ್ರಶ್ನೆಗೆ ತಲೆ ಅಲ್ಲಾಡಿಸುತ್ತಾ ಇಲ್ಲ ಅಂತ ಹೇಳಿದ್ದಾರೆ. ಯುಎಸ್ ಓಪನ್ ಟೂರ್ನಿ ನಡೆಯುತ್ತಾ ಅಂತ ನೀವು ಈಗ ಕೇಳಿದ್ರೆ ಇಲ್ಲ ಅಂತನೇ ಹೇಳುತ್ತೇನೆ. ಹಾಗೇ ಕೆಲವು ತಿಂಗಳು ಬಿಟ್ಟು ಈ ಪ್ರಶ್ನೆ ಕೇಳಿದಾಗ, ನನಗೆ ಗೊತ್ತಿಲ್ಲ. ಆದ್ರೂ ನಡೆಯಬಹುದು ಎಂಬು ಆಶಾಭಾವನೆ ಇದೆ ಅಂತಾರೆ ನಡಾಲ್.
ಟೂರ್ನಿ ನಡೆಯುತ್ತೋ ಇಲ್ಲವೋ ಎಂಬುದನ್ನು ಈಗಲೇ ಹೇಳುವ ಹಾಗಿಲ್ಲ. ನಾವು ಕಾಯಬೇಕು. ನ್ಯೂಯಾರ್ಕ್‍ನಲ್ಲಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ನೋಡಿಕೊಳ್ಳಬೇಕು. ಯಾಕಂದ್ರೆ ನ್ಯೂಯಾರ್ಕ್‍ನಲ್ಲಿ ಕೊರೋವಾ ವೈರಸ್ ಹಾವಳಿ ಹೆಚ್ಚಾಗಿದೆ. ಮುಂದೆ ನೋಡೋಣ ಅಂತಾರೆ ನಡಾಲ್.
ನಮಗೆ ಆರೋಗ್ಯ ಮುಖ್ಯವಾಗಿತ್ತದೆ. ಹೀಗಾಗಿ ತಾಳ್ಮೆಯ ಜೊತೆ ಜವಾಬ್ದಾರಿಯೂ ಇರಬೇಕು. ಆಟಗಾರರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಸದ್ಯಕ್ಕೆ ಇದು ಅಸಾಧ್ಯ ಎಂದು ಅವರು ಹೇಳಿದ್ರು.








