ಅಮೆರಿಕಾದಲ್ಲಿ ಮಂಕಿಪಾಕ್ಸ್ ಕಾಯಿಲೆಯಿಂದ ಮೊದಲ ಸಾವು ಪತ್ತೆ..
ಅಮೆರಿಕಾದಲ್ಲಿ ಮೊದಲ ಮಂಕಿಪಾಕ್ಸ್ ಸಾವು ಲಾಸ್ ಏಂಜಲೀಸ್ ನಲ್ಲಿ ವರದಿಯಾಗಿದೆ. ಮಂಗನ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ರೋಗನಿರೋಧಕ ವ್ಯವಸ್ಥೆ ಕ್ಷೀಣಿಸಿ ಸಾವನ್ನಪ್ಪಿದ್ದಾರೆ.
ಲಾಸ್ ಏಂಜಲೀಸ್ ಕೌಂಟಿ ಪಬ್ಲಿಕ್ ಹೆಲ್ತ್ ವಿಭಾಗದ ವೈದ್ಯರು, ರೋಗಿಯ ಶವಪರೀಕ್ಷೆ ನಡೆಸಿ, ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಧೃಡಿಕರಿಸಿದ್ದಾರೆ.
ಅಮೆರಿಕದಲ್ಲಿ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಳೆದ ತಿಂಗಳು ಟೆಕ್ಸಾಸ್ ನಗರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಆತ ಮಂಗನ ಕಾಯಿಲೆಯಿಂದ ಮೃತಪಟ್ಟಿರುವುದು ದೃಢಪಟ್ಟಿಲ್ಲ.
ಅಮೆರಿಕದಲ್ಲಿ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 22 ಸಾವಿರಕ್ಕೆ ಏರಿಕೆಯಾಗಿದ್ದರೂ ಯಾವುದೇ ಸಾವು ನೋವು ಇಲ್ಲಿಯವರೆಗೆ ಸಂಭವಿಸಿರಲಿಲ್ಲ. ಆದರೆ ಇತ್ತೀಚಿಗೆ ಮಂಗನ ಕಾಯಿಲೆಯೊಂದು ಸಾವಿಗೀಡಾಗಿರುವುದು ವೈದ್ಯರಲ್ಲಿ ಆತಂಕ ಮೂಡಿಸಿದೆ.








