Vijayapura – ಜೀವಭಯದಲ್ಲೇ ಹಳ್ಳ ದಾಟಿ ಶಾಲೆ ಸೇರುವ ಮಕ್ಕಳು..
ಭಾರಿ ಮಳೆಯಿಂದಾಗಿ ಈ ಭಾರಿಯ ಉತ್ತರ ಕರ್ನಾಟಕದ ಹಳ್ಳ ಕೊಳ್ಳಗಳು ಹರಿಯುತ್ತಿವೆ. ಹಳ್ಳ ಗಳು ಉಕ್ಕಿ ಹರಿಯುತ್ತಿರುವುದರಿಂದ ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ತುಂಬಿ ಹರಿಯುವ ಹಳ್ಳ ದಾಟಿ ಜೀವ ಭಯದಲ್ಲೆ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ವಿಜಯಪುರ ಜಿಲ್ಲೆಯ ಆಲಿಯಾಬಾದ್ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಅಲಿಯಾಬಾದ್ ಗ್ರಾಮದ ಹೊರ ಭಾಗದಲ್ಲಿರೋ ಹಳ್ಳ ಮಳೆಗಾಲ ಬಂತೆಂದೆರೆ ಸಾಕು ತುಂಬಿ ಹರಿಯುತ್ತದೆ ಸೇತುವೆ ಇಲ್ಲದ ಕಾರಣ ಹಳ್ಳ ದಾಟಿ ಶಾಲೆಗೆ ಹೋಗಲು ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ತುಂಬಿ ಹರಿಯೋ ಹಳ್ಳದಲ್ಲೇ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಮಕ್ಕಳು ಶಾಲೆ ಸೇರುತ್ತಿದ್ದಾರೆ. ನೀರ ಹೆಚ್ಚಾದಾಗ ಪೋಷಕರು ಮಕ್ಕಳನ್ನ ಹೊತ್ತುಕೊಂಡು ರಸ್ತೆ ದಾಟಿಸುತ್ತಿದ್ದಾರೆ.

ಪ್ರತಿದಿನ ವಸತಿ ತೋಟಗಳಿಂದ ಅಲಾಯಾಬಾದ್ ಗ್ರಾಮದ ಶಾಲೆಗೆ ಬರುವ 40 ಮಕ್ಕಳು ಗ್ರಾಮದ ರೈತರ ಪಾಲಿಗೆ ಮಳೆಗಾಲ ಬಂದಾಗಲೆಲ್ಲ ಹಳ್ಳ ಕಂಟಕವಾಗಿ ಪರಿಣಮಿಸುತ್ತದೆ. ಹಾಗಾಗಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.








