Mandya: ನೈತಿಕ ಪೊಲೀಸ್ ಗಿರಿ – ಯುವಕರ ಕೈ ಕಾಲು ಕಟ್ಟಿ ಮಾರಾಣಾಂತಿಕ ಹಲ್ಲೆ..
ಮಂಡ್ಯ:ಗಣಪತಿ ವಿಸರ್ಜನೆ ವೇಳೆ ಡಿಜೆ ಮೆರವಣಿಗೆಯಲ್ಲಿ ಕುಣಿದ ವಿಚಾರಕ್ಕೆ ಯುವಕರ ಕೈ ಕಾಲು ಕಟ್ಟಿ ಮಾರಾಣಾಂತಿಕ ಹಲ್ಲೆ ಮಾಡಿ ನೈತಿಕ ಪೊಲೀಸ್ ಗಿರಿ ಮೆರದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಪಿ.ಬಿ.ಮಂಚನಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಗಣೇಶ ವಿಸರ್ಜನೆ ವೇಳೆ ಯುವಕರು ಮೆರವಣಿಗೆ ನಡೆಸಿದ್ದರು. ಈ ವೇಳೆಗೆ ಡಿಜೆ ಸೌಂಡಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು.
ಈ ವೇಳೆ ಅದೇ ಗ್ರಾಮದ ರೈತ ಮುಖಂಡ ನಾಗೇಗೌಡ ಎಂಬುವವರು ಡಿಜೆ ಮತ್ತು ಡ್ಯಾನ್ಸ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನ ಲೆಕ್ಕಿಸದ ಯುವಕರು ಡ್ಯಾನ್ಸ ಮಾಡಿ ಗಣಪತಿ ವಿಸರ್ಜನೆ ಮಾಡಿದ್ದಾರೆ.
ಇದಾದ ನಂತರ ಮುತ್ತುರಾಜ್, ವಿನಯ್, ದರ್ಶನ್, ದೊರೆ, ಧರ್ಮರಾಜದ, ಅಮಿತ್ ಎಂಬ ಯುವಕರನ್ನ ನಾಗೇಗೌಡ ಮನೆಗೆ ಕರೆಸಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಯುವಕರನ್ನು ಕಟ್ಟಿ ಹಾಕಿದ ನಾಗೇಗೌಡ ಹಾಗೂ ಸಹಚರರು ಮನಬಂದಂತೆ ಥಳಿಸಿದ್ದಾರೆ.
ನಾಗೇಗೌಡ ನಿಂದ ಒದೆ ತಿಂದ ಯುವಕರು ಕೆಆರ್‌ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವಕರ ದೂರು ಆಧರಿಸಿ. ಇದೀಗ ನಾಗೇಗೌಡ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.








