ಬೆಂಗಳೂರು : ಇಂದಿನಿಂದ ಬಸ್ಸುಗಳ ರಾತ್ರಿ ಸಂಚಾರ ಆರಂಭವಾಗಲಿದೆ ಎಂದು ಕೆ.ಎಸ್.ಆರ್.ಟಿ.ಸಿಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ಆದ್ದರಿಂದ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದರಿಂದಾಗಿ ಸಾಕಷ್ಟು ಜನ ತಮ್ಮ ತವರಿಗೆ ತೆರಳಲು ಹರಸಾಹಸ ಪಟ್ಟಿದ್ದರು. ಜೊತೆಗೆ ಕೆ.ಎಸ್.ಆರ್.ಟಿ.ಸಿ ನಷ್ಟ ಅನುಭವಿಸಿತ್ತು.
ಲಾಕ್ ಡೌನ್ ಸಡಿಲಗೊಂಡ ಬಳಿಕ ಕೆ.ಎಸ್.ಆರ್.ಟಿ. ಸಿ ಕೆಲ ನಿಯಮಗಳನ್ನು ಅನುಸರಿಸಿ ಬಸ್ ಸಂಚಾರವನ್ನು ಆರಂಭಿಸಿತ್ತು. ರಾಜ್ಯದ ರಾಜಧಾನಿ ಮತ್ತು ರಾಜ್ಯದ ಬೇರೆ ಜಿಲ್ಲೆಗಳಿಂದ ಬಸ್ ಸಂಚಾರ ಬೆಳ್ಳಿಗೆ 7 ರಿಂದ ಆರಂಭವಾಗಿ ಸಂಜೆ 7 ಗಂಟೆಗೆ ತಲುಪಬೇಕಾದ ಸ್ಥಳ ತಲುಪಬೇಕಿತ್ತು. ಸಂಜೆ ಏಳು ಗಂಟೆಯ ಬಳಿಕ ಬಸ್ ಸಂಚಾರವನ್ನು ರದ್ದು ಮಾಡಲಾಗಿತ್ತು.
ಇದೀಗ ರಾಜ್ಯ ಸರ್ಕಾರದ ಆದೇಶದಂತೆ , ಕೆ ಎಸ್ ಆರ್ ಟಿ ಸಿ ಇಂದಿನಿಂದ ರಾತ್ರಿ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ಹಾಗಾಗಿ ಪ್ರಯಾಣಿಕರು ಮೊದಲಿನಂತೆ ರಾತ್ರಿ ಪ್ರಯಾಣ ಮಾಡಬಹುದು. ಕೊವಿಡ್-19 ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಲ ಕ್ರಮಗಳ ತೆಗೆದುಕೊಂಡಿದೆ. ಪ್ರಯಾಣ ಮಾಡಬೇಕಿದ್ದರೇ ಸಾಮಾಜಿಕ ಅಂತರ ಕಾಪಾಡಿಕೊಳ್ಳು








