ind-vs-aus-1st | ಆಸೀಸ್ ವಿರುದ್ಧ ಸೋತ ಟೀಂ ಇಂಡಿಯಾ : ಪಾಂಡ್ಯ ಆಟ ವ್ಯರ್ಥ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಅತ್ಯಧಿಕ ರನ್ ದಾಖಲಿಸಿದ ಆನಂದ ಭಾರತಕ್ಕೆ ಸಿಗಲೇ ಇಲ್ಲ. ಹಾರ್ದಿಕ್ ಪಾಂಡ್ಯ ಗುಡುಗು ಮಿಂಚಿನ ಆರ್ಭಟ, ಕೆ.ಎಲ್ ರಾಹುಲ್ ಅಬ್ಬರ, ಸೂರ್ಯ ಕುಮಾರ್ ಯಾದವ್ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಭಾರತ 208 ರನ್ ಸಾಧಿಸಿದ್ರೂ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಬ್ಯಾಟಿಂಗ್ ಗೆ ಅನುಕೂಲವಾದ ಪಿಚ್ ನಲ್ಲಿ ಆಸೀಸ್ ಬ್ಯಾಟರ್ ಗಳು ಅಬ್ಬರಿಸಿದ್ರು, ಟೀಂ ಇಂಡಿಯಾದ ಬ್ಯಾಟರ್ ಗಳಾದ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಸೇರಿ ಎಂಟು ಓವರ್ ಗಳಲ್ಲಿ 101 ರನ್ ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಟೀಂ ಇಂಡಿಯಾ 19.1 ಓವರ್ ನಲ್ಲಿ ಪಂದ್ಯ ಸೋಲಾಬೇಕಾಯ್ತು.
ಟಾಸ್ ಗೆದ್ದ ಆಸೀಸ್ ತಂಡದ ನಾಯಕ ಆರೋನ್ ಪಿಂಚ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಬಂದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಶರ್ಮಾ 11 ರನ್, ವಿರಾಟ್ ಕೊಹ್ಲಿ 2 ರನ್ ಗಳಿಸಿ ಔಟ್ ಆದರು. ಇದಾದ ಬಳಿಕ ರಾಹುಲ್, ಸೂರ್ಯ ಕುಮಾರ್ ಯಾದವ್ ಉತ್ತಮ ಜೊತೆಯಾಟವನ್ನಾಡಿದ್ರು.

ರಾಹುಲ್ 35 ಎಸೆತಗಳಲ್ಲಿ 55 ರನ್ ಗಳಿಸಿದ್ರೆ, ಸೂರ್ಯ 25 ಎಸೆತಗಳಲ್ಲಿ 46 ರನ್ ಗಳಿಸಿ ಔಟ್ ಆದರು. ಇದಾದ ನಂತರ ಹಾರ್ದಿಕ್ ಪಾಂಡ್ಯ ಬೆಂಕಿ ಬ್ಯಾಟಿಂಗ್ ಶುರುವಾಯ್ತು. ಪಾಂಡ್ಯ 30 ಎಸೆತಗಳಲ್ಲಿ 5 ಸಿಕ್ಸರ್, ಆರು ಬೌಂಡರಿ ಸಹಿತ 71 ರನ್ ಗಳಿಸಿದರು. ಅಕ್ಷರ್ ಪಟೇಲ್ ಆರು ರನ್, ದಿನೇಶ್ ಕಾರ್ತಿಕ್ 6 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 208 ರನ್ ಗಳಿಸಿತು.
ಈ ಗುರಿಯನ್ನು ಬೆನ್ನಟ್ಟಿದ ಆಸೀಸ್ ಗೆ ಉತ್ತಮ ಆರಂಭ ದೊರೆಯಿತು. ಪಿಂಚ್ 22 ರನ್, ಕ್ಯಾಮರೋನ್ ಗ್ರೀನ್ 61, ಸ್ವೀವೆನ್ ಸ್ಮಿತ್ 35 ರನ್ ಗಳಿಸಿದರು. ಕೊನೆಯಲ್ಲಿ ಮ್ಯಾಥ್ಯೂ ವೇಡ್ 21 ಎಸೆತಗಳಲ್ಲಿ 45 ರನ್ ಚಚ್ಚಿ ತಂಡಕ್ಕೆ ಜಯ ತಂದುಕೊಟ್ಟರು. ಇನ್ನುಳಿದಂತೆ ಜೋಷ್ 17, ಟೀಮ್ ದೆವಿಡ್ 18 ರನ್ ಗಳಿಸಿದರು.
ಅಂತಿಮವಾಗಿ 19.1 ನೇ ಒವರ್ ನಲ್ಲಿ ಆಸೀಸ್ ಗೆಲುವಿನ ನಗೆ ಬೀರಿತು. ಭಾರತದ ಪರ ಅಕ್ಷರ ಪಟೇಲ್ ಮೂರು, ಉಮೇಶ್ ಯಾದವ್ ಎರಡು, ಚಹಾಲ್ 1 ವಿಕೆಟ್ ಪಡೆದರು.








