Dinesh karthik – ತಂಡದಲ್ಲಿ ಪಂತ್ ಯಾಕೆ – ಡಿಕೆ ಕೊಟ್ಟ ಉತ್ತರವೇನು ?
ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ್ ವೇದಿಕೆಯಾಗಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಆರಂಭಿಸಿದ್ರೆ, ದಿನೇಶ್ ಕಾರ್ತಿಕ್ ತಮ್ಮದೇಯಾದ ಶೈಲಿಯಲ್ಲಿ ಮ್ಯಾಚ್ ಫಿನಿಷ್ ಮಾಡಿದರು.
ಕೊನೆಯ ಓವರ್ ನಲ್ಲಿ 9 ರನ್ ಗಳು ಬೇಕಾಗಿದ್ದ ಸಮಯದಲ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆದ್ರೆ ಕೆಲವು ದಿನಗಳಿಂದ ನೋಡಿದ್ರೆ ಪಂತ್ ತಂಡದಲ್ಲಿ ಇದ್ದರೇ ದಿನೇಶ್ ಕಾರ್ತಿಕ್ ಗೆ ಸ್ಥಾನವಿರುತ್ತಲೇ ಇರುತ್ತಿಲ್ಲ. ಕಾರ್ತಿಕ್ ಇದ್ದರೇ ಮ್ಯಾಚ್ ನಲ್ಲಿ ಪಂತ್ ಇರುವುದಿಲ್ಲ.
ಇಬ್ಬರೂ ತಂಡದಲ್ಲಿ ಇದ್ದಿದ್ದರೂ ತೀರಾ ಕಡಿಮೆ. ಆದ್ರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಇಬ್ಬರೂ ಕಣಕ್ಕೆ ಇಳಿದಿದ್ದರು.

ಈ ಬಗ್ಗೆ ಮ್ಯಾಚ್ ನಂತರ ಮಾತನಾಡಿದ ದಿನೇಶ್ ಕಾರ್ತಿಕ್, ಮಳೆಯಿಂದಾಗಿ ಪಂದ್ಯವನ್ನು 8 ಓವರ್ ಗಳಿಗೆ ಸೀಮಿತ ಮಾಡಲಾಗಿತ್ತು.
ಇದರಿಂದ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಐವರು ಬೌಲರ್ ಗಳ ಅವಶ್ಯಕತೆ ಇರಲಿಲ್ಲ. ತಂಡದಲ್ಲಿ ನಾಲ್ಕು ಜನ ಇದ್ದರೇ ಸಾಕು. ಆದ್ರೆ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಐದನೇ ಬೌಲರ್ ಆಪ್ಷನ್ ಇದೆ.
ಅದಕ್ಕಾಗಿಯೇ ಉಮೇಶ್ ಯಾದವ್ ಸ್ಥಾನದಲ್ಲಿ ಪಂತ್ ಅಂತಿಮ ತಂಡದಲ್ಲಿ ಕಾಣಿಸಿಕೊಂಡರು.
ಮತ್ತೊಂದು ವಿಚಾರ ಏನಂದರೇ ಓವರ್ ಗಳನ್ನು ಸೀಮಿತಗೊಳಿಸಿದ್ದಾಗ ಸ್ಪೆಷಲಿಸ್ಟ್ ಬ್ಯಾಟರ್ ಬೇಕಾಗುತ್ತಾನೆ.
ಅದಕ್ಕಾಗಿಯೇ ನನ್ನ ಜೊತೆ ಪಂತ್ ಕೂಡ ತಂಡದಲ್ಲಿ ಕಾಣಿಸಿಕೊಂಡರು. ಆದ್ರೆ ಇದೇ ಮುಂದಿನ ಪಂದ್ಯದಲ್ಲಿ ನಡೆಯುತ್ತಾ ಎಂದ್ರೆ ನನಗೆ ಗೊತ್ತಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.








