Mysore ದಸರಾ ಉದ್ಘಾಟನೆ : ಇಂದಿನ ಕಾರ್ಯಕ್ರಮಗಳ ಪಟ್ಟಿ ಹೀಗಿದೆ
ಮೈಸೂರು : ಇಂದಿನಿಂದ 9 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ವೈಭವ ಆರಂಭವಾಗಲಿದೆ.
ದಸರಾ ಮಹೋತ್ಸವಕ್ಕೆ ಇಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಚಾಲನೆ ನೀಡಲಿದ್ದಾರೆ.
ರಾಷ್ಟ್ರಪತಿಯವರು ತಾಯಿ ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಟಾರ್ಚನೆ ಮಾಡಿ, ದೀಪ ಬೆಳಗುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಇತ್ತಅಂಬಾವಿಲಾಸ ಅರಮನೆಯಲ್ಲಿ ಇಂದಿನಿಂದ ಖಾಸಗಿ ದರ್ಬಾರ್ ನಡೆಯಲಿದೆ.
ನಗರದ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಇಂದಿನ ಕಾರ್ಯಕ್ರಮಗಳು ಏನು?
ಬೆಳಗ್ಗೆ 9:45 ರಿಂದ 10.05ರ ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆ
ಮಧ್ಯಾಹ್ನ 12:00 – ವಿಜ್ಞಾನ ಭವನದಲ್ಲಿ ಕೈಗಾರಿಕಾ ದಸರಾ ಉದ್ಘಾಟನೆ
ಮಧ್ಯಾಹ್ನ 12:30 – ಕಲಾಮಂದಿರದಲ್ಲಿ ಶಿವರಾಜ್ ಕುಮಾರ್ ಅವರಿಂದ ಚಲನಚಿತ್ರೋತ್ಸವ ಉದ್ಘಾಟನೆ
ಮಧ್ಯಾಹ್ನ 12.30 – ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಟ ಪ್ರದರ್ಶನ ಉದ್ಘಾಟನೆ
ಮಧ್ಯಾಹ್ನ 1.00 ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ
ಮಧ್ಯಾಹ್ನ 3:30 –ದೇವರಾಜ ಅರಸು ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ
ಸಂಜೆ 4 – ವಸ್ತು ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಆನಂದ್ ಸಿಂಗ್
ಸಂಜೆ 5 – ಓವೆಲ್ ಮೈದಾನದಲ್ಲಿ ಯೋಗ ದಸರಾ, ನೃತ್ಯರೂಪಕ
ಸಂಜೆ 5:30 – ಅರಮನೆಯಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಸಂಜೆ 5:30 – ರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನ ಸ್ಥಳ: ಕಲಾಮಂದಿರ
ಸಂಜೆ 6 – ಅರಮನೆ ವೇದಿಕೆ ಕಾರ್ಯಕ್ರಮ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ
ಸಂಜೆ 6:30 – ವಿದ್ಯುತ್ ದೀಪಾಲಂಕಾರ








