ಜೇವರ್ಗಿ: ವರದಿಗಾಗಿ ತೆರಳಿದ್ದ ಸ್ಥಳೀಯ ಸುದ್ದಿಮೂಲ ಕನ್ನಡ ದಿನ ಪತ್ರಿಕೆಯ ವರದಿಗಾರನಿಗೆ ಅವಾಚ್ಯ ಪದ ಬಳಸಿ, ಮೊಬೈಲನ್ನು ಕಸಿದುಕೊಂಡು ಹಾಗೂ ಶರ್ಟಿನ ಕಾಲರ್ ಹಿಡಿದು ನೂರಾರು ಜನರ ಎದುರುಗಡೆ ಎಳೆದಾಡಿದ ಪೋಲಿಸ್ ಪೇದೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೇವರ್ಗಿ ಪತ್ರಿಕಾ ವರದಿಗಾರರು ಆಗ್ರಹಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರಸಲ್ಲಿಸಿದ ಜೇವರ್ಗಿಯ ವರದಿಗಾರರು, ವರದಿಗಾಗಿ ಪಟ್ಟಣದ ಹಳೆ ತಹಸೀಲ್ ಎದುರುಗಡೆ ರಾಜ್ಯ ರಸ್ತೆ ಹೆದ್ದಾರಿಯ ಮೇಲೆ ಕಾರಹುಣ್ಣಿಮೆ ನಿಮಿತ್ಯ ಎತ್ತುಗಳ ಮೆರವಣಿಗೆ ನಡೆಯುತ್ತಿತ್ತು.
ಆ ಸಂದರ್ಭದಲ್ಲಿ ಛಾಯಚಿತ್ರಗಳನ್ನು ಸುದ್ದಿ ಮೂಲ ಪತ್ರಿಕೆಯ ವರದಿಗಾರ ಸೆರೆ ಹಿಡಿಯುತ್ತಿದ್ದಾಗ ಪೋಲಿಸ್ ಪೇದೆ ಸಿದ್ಧಣ್ಣ ಮೊಗನಟಗಾ ಎಂಬುವವರು ವರದಿಗಾರನ ಮೊಬೈಲ ಕಸಿದು ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ, ಶರ್ಟಿನ ಕಾಲರ್ ಹಿಡಿದು ಪೋಲಿಸ್ ಪೇದೆ ಪತ್ರಿಕಾ ಸ್ವಾತಂತ್ರö್ಯಕ್ಕೆ ದಕ್ಕೆ ತಂದಿದ್ದಾರೆ.
ಕೋವಿಡ್-೧೯ ಕಾರಣ ಕಲಬುರಗಿ ಜಿಲ್ಲೆಯಲ್ಲಿ ಕಲಂ ೧೪೪ ಜಾರಿಯಲ್ಲಿ ಇದ್ದರು ಸಹ ರಾಜ್ಯ ಹೆದ್ದಾರಿಯ ಮೇಲೆ ಎತ್ತುಗಳ ಮೆರವಣಿಗೆ ನಡೆಯುತ್ತಿತ್ತು. ಇದನ್ನು ವರದಿ ಮಾಡಲು ತೆರಳಿದ್ದ ವರದಿಗಾರನಿಗೆ ಅವಮಾನ ಮಾಡಿದ್ದು ಖಂಡನೀಯ. ಆದ್ದರಿಂದ ಪೋಲಿಸ್ ಪೇದೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೇವರ್ಗಿ ಪತ್ರಿಕಾ ವರದಿಗಾರರು.








