Bangalore – ಕಂಠಪೂರ್ತಿ ಕುಡಿಸಿ ಕಾರು ಕದ್ದ ದಂಪತಿ
ಬೆಂಗಳೂರು : ದಂಪತಿಯೊಂದು ಡ್ರೈವರ್ ಗೆ ಕಂಠಪೂರ್ತಿ ಕುಡಿಸಿ ಕಾರು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಸಿಆರ್ ಸಿ ಎಫ್ ಗ್ರೌಂಡ್ ಬಳಿ ನಡೆದಿದೆ.
ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜ ಅಲಿಯಾಸ್ ಮೇಕೆ ಮಂಜ ಹಾಗೂ ವೇದಾವತಿ ಬಂಧಿತ ಆರೋಪಿಗಳು.
ಇವರು ಒಂದೇ ರಾತ್ರಿಯಲ್ಲಿ ಕಾರು ಚಾಲಕನನ್ನ ಪರಿಚಯಿಸಿಕೊಂಡು ಕಾರು ದೋಚಿದ್ದಾರೆ.

ರಾತ್ರಿ ಓಲಾ ಕಾರ್ ನ ಚಾಲಕನನ್ನ ಪರಿಚಯ ಮಾಡಿಕೊಂಡಿದ್ದ ಮೇಕೆ ಮಂಜ,
ದುಡ್ಡು ಕೊಟ್ಟು ಕಾರಿನಲ್ಲಿ ಸುತ್ತಾಡಿಸು ಎಂದಿದ್ದ. ನಂತರ ಪಾರ್ಟಿ ಮಾಡೋಣ ಬಾ ಎಂದು ಬೆಳಗಿನ ಜಾವದವರೆಗೂ ಕುಡಿಸಿ ಕಾರು ದೋಚಿದ್ದಾನೆ.
ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದಂಪತಿಯನ್ನು ಬಂಧಿಸಿದೆ.








