ನನಗೆ ಲಂಚ ಕೊಡಬೇಕಿಲ್ಲ ನಾನು ಭ್ರಷ್ಟ ಅಧಿಕಾರಿಯಲ್ಲ
ಬೆಂಗಳೂರು : ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ನನಗೆ ಲಂಚ ಕೊಡಬೇಕಿಲ್ಲ ನಾನು ಭ್ರಷ್ಟ ಅಧಿಕಾರಿ ಆಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಲಿಖಿತ ಆದೇಶ ಹೊರಡಿಸಿದ್ದಾರೆ. ಸುತ್ತೊಲೆಯಲ್ಲಿ ಸಿಟಿಜನ್ ಎನ್ಕ್ವೆರಿ ಕೌನ್ಸಿಲ್ ಮತ್ತು ಸಿಐಸಿ ಟ್ರಸ್ಟ್ ನಿಂದ ಸ್ವೀಕೃತವಾಗಿರುವ ಪತ್ರದ ಉಲ್ಲೇಖದಂತೆ ಸಂಸ್ಥೆಗಳು ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನವನ್ನು ಅಕ್ಟೋಬರ್ 2 ರಿಂದ 20 ರವೆರೆಗೆ ಹಮ್ಮಿಕೊಂಡಿವೆ. ಈ ಸಂಸ್ಥೆ ತಯಾರಿಸಿರುವ ನನಗೆ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾಎ ಎಂಬ ನಾಮಫಲಕವನ್ನು ಎಲ್ಲಾ ಸರ್ಕಾರ ಕಚೇರಿಗಳಲ್ಲಿಗೂ ಅಳವಡಿಸಲು ಆದೇಶಿಸಲಾಗಿದೆ.

ಅಂದಹಾಗೆ ರಾಜ್ಯದಲ್ಲಿ ಭ್ರಷ್ಟಾಚಾರ ಭಾರಿ ಸದ್ದು ಮಾಡುತ್ತಿದೆ. ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿ ಪೇ ಸಿಎಂ ಪೋಸ್ಟರ್ ಅಭಿಮಾನ ಆರಂಭಿಸಿದೆ. ಇತ್ತ ಕಾಂಗ್ರೆಸ್ ಗೆ ಬಿಜೆಪಿ ಟಕ್ಕರ್ ಕೊಡಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ.








