ಮಂಗಳೂರು, ಜೂನ್ 6 : ಮಂಗಳೂರಿನ ಪಡೀಲ್ ಬಳಿ ಕೇರಳದ ತ್ರಿಶೂರ್ ನಿಂದ ಜೈಪುರಕ್ಕೆ ತೆರಳುತ್ತಿದ್ದ ಶ್ರಮಿಕ್ ಸ್ಪೆಷಲ್ ರೈಲಿನ ಎಂಜಿನ್ ಹಳಿ ತಪ್ಪಿರುವ ಘಟನೆ ನಡೆದಿದೆ.
ಮಂಗಳೂರಿನ ಪಡೀಲ್ ರೈಲ್ವೆ ಹಳಿಯಲ್ಲಿ ರಾತ್ರಿ ಸುಮಾರು 2 ಗಂಟೆಗೆ ಕೇರಳದ ತ್ರಿಶೂರ್‌ನಿಂದ ಜೈಪುರ್‌ಗೆ ತೆರಳುತ್ತಿದ್ದ ಶ್ರಮಿಕ್ ಸ್ಪೆಷಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿದೆ. ಇಂದು ಬೆಳಗಿನ ಜಾವ 4ರ ವೇಳೆಗೆ ಕಾರ್ಮಿಕರ ಪ್ರಯಾಣಕ್ಕೆ ಬದಲಿ ಎಂಜಿನ್ ವ್ಯವಸ್ಥೆ ಮಾಡಲಾಗಿದೆ.
ಹಳಿ ತಪ್ಪಿರುವ ರೈಲ್ವೆ ಎಂಜಿನ್ ತೆರವು ಕಾರ್ಯ ಪ್ರಗತಿಯಲ್ಲಿದ್ದು ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ








