ADVERTISEMENT
Tuesday, September 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

admin by admin
June 17, 2026
in Newsbeat, Sports, ಕ್ರೀಡೆ
Iran's 33-year-old goalkeeper Alireza Beirand

Iran's 33-year-old goalkeeper Alireza Beirand

Share on FacebookShare on TwitterShare on WhatsappShare on Telegram

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ ಫುಟ್‍ಬಾಲ್ ಆಟದ ಮೇಲೆ ಎಲ್ಲಿಲ್ಲದ ಪ್ರೀತಿ. ಕುರಿ ಮೇಯಿಸುತ್ತಾ, ಸ್ಥಳೀಯ ಹುಡುಗರ ಜೊತೆ ಕಲ್ಲನ್ನು ದೂರ ಎಸೆಯುವ ದಾಲ್ ಪರಾನ್ ಎಂಬ ಆಟವನ್ನು ಆಡುತ್ತಿದ್ದ. ಇದು ಅಲ್ಲಿನ ಜನರ ಗಾಮೀಣ ಕ್ರೀಡೆ ಕೂಡ ಆಗಿತ್ತು. ಆದ್ರೆ ಈ ಹುಡುಗ ತಾನೊಬ್ಬ ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕನಸು ಕಾಣುತ್ತಿದ್ದ.

Related posts

kiccha-sudeep-gives-stern-warning-to-modern-manju-and-agni-boys-in-bigg-boss-kannada-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

September 21, 2026
chikkanna-starrer-laxmiputra-ammana-haadu-released-actress-tara-emotional

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

September 21, 2026

ಆದ್ರೆ ಮಗನ ಫುಟ್‍ಬಾಲ್ ಪ್ರೀತಿಗೆ ಅಪ್ಪ ವಿರೋಧ ವ್ಯಕ್ತಪಡಿಸಿದ್ದ.ಫುಟ್‍ಬಾಲ್‍ನಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಂದೆಯ ವಾದವಾಗಿತ್ತು. ಇದ್ರಿಂದ ಮನಿಸಿಕೊಂಡು ಮನೆ ಬಿಟ್ಟು ಓಡಿ ಹೋಗಿದ್ದ. ಸಂಬಂಧಿಕರಿಂದ ಸಾಲ ಮಾಡಿಕೊಂಡು ಹೋಗಿದ್ದ ಹುಡುಗ ಹೋಗಿ ತಲುಪಿದ್ದು ಗೊತ್ತು ಗುರಿ ಇಲ್ಲದ ಊರನ್ನು. ಕೈಯಲ್ಲಿದ್ದ ಕಾಸು ಎಲ್ಲಾ ಖರ್ಚಾಗಿ ಹೋಗಿತ್ತು. ಊಟ, ತಿಂಡಿಗೂ ದುಡ್ಡಿಲ್ಲ. ಅಂದ ಮೇಲೆ ರೂಂ ಎಲ್ಲಿ ಸಿಗುತ್ತೆ. ಬೀದಿ ಬೀದಿಗಳಲ್ಲಿ ಸುತ್ತಾಡಿ ಕೊನೆಗೆ ಒಂದು ಫುಟ್‍ಬಾಲ್ ಕ್ಲಬ್‍ನ ಗೇಟ್ ಮುಂದೆ ರಾತ್ರಿ ಕಳೆದಿದ್ದ. ಸುಸ್ತಾಗಿ ಮಲಗಿದ್ದವನಿಗೆ ಬೆಳಗ್ಗೆ ಆಗಿದ್ದೇ ಗೊತ್ತಾಗಲಿಲ್ಲ.

ಕಣ್ಣು ಬಿಟ್ಟು ನೋಡಿದಾಗ ಅವನಿಗೆ ಅಚ್ಚರಿ. ಮಲಗಿದ್ದ ಜಾಗದಲ್ಲಿ ನಾಣ್ಯಗಳು ಬಿದ್ದಿದ್ದವು. ಜನ ಈ ಹುಡುಗನನ್ನು ಭಿಕ್ಷುಕ ಅಂತ ಅಂದುಕೊಂಡಿದ್ದರು. ಅವನ ಪರಿಸ್ಥಿತಿಯನ್ನು ನೋಡಿ ಭಿಕ್ಷೆ ಹಾಕಿದ್ದರು. ಆದ್ರೂ ಆ ಹುಡುಗ ತಲೆಕೆಡಿಸಿಕೊಳ್ಳಲಿಲ್ಲ. ಬಿದ್ದಿರುವ ನಾಣ್ಯಗಳನ್ನು ಸೇರಿಸಿಕೊಂಡು ಹೊಟ್ಟೆ ತುಂಬಾ ತಿಂಡಿ ಮಾಡಿದ್ದ.

ಅದೇನೋ ಗೊತ್ತಿಲ್ಲ. ಫುಟ್‍ಬಾಲ್ ಮೇಲಿನ ಆದಮ್ಯ ಪ್ರೀತಿ ಆತನನ್ನು ಸೆಳೆಯುತ್ತಿತು. ಅದಕ್ಕಾಗಿ ಏನು ಮಾಡಲು ಬೇಕಿದ್ರೂ ರೆಡಿಯಾಗಿದ್ದ ಆ ಭಾಲಕ. ಫುಟ್‍ಬಾಲ್ ಕ್ಲಬ್‍ನಲ್ಲಿ ಹುಡುಗರು ಆಡುತ್ತಿರುವುದನ್ನು ಆಸಕ್ತಿಯಿಂದಲೇ ನೋಡುತ್ತಿದ್ದ. ಆದ್ರೆ ಆ ಹುಡುಗರ ಜೊತೆ ಆಟವಾಡಲು ಅಂಜಿಕೆ. ಆದ್ರೂ ಅವರ ಸ್ನೇಹ ಸಂಪಾದಿಸಿಕೊಂಡು ಫುಟ್‍ಬಾಲ್ ಆಡುವುದನ್ನು ಕಲಿತ. ಆದ್ರೆ ದುಡ್ಡು ಇಲ್ಲದೆ ಹೊಟ್ಟೆ ತುಂಬಿಸಲು ಪರದಾಟ ನಡೆಸಿದ್ದ. ಅದಕ್ಕಾಗಿ ಬೀದಿ ರಸ್ತೆಗಳನ್ನು ಗುಡಿಸುತ್ತಿದ್ದ. ಕಾರು ವಾಶ್ ಮಾಡುತ್ತಿದ್ದ. ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದ. ಹೀಗೆ ಕೂಲಿ ಕೆಲಸ ಮಾಡ್ಕೊಂಡು ಮುಂದೆ ಕ್ಲಬ್ ಮಟ್ಟದ ಫುಟ್‍ಬಾಲ್ ಆಟಗಾರನಾದ. ಆ ನಂತರ ಹಿಂತಿರುಗಿ ನೋಡಲೇ ಇಲ್ಲ.

21 ವರ್ಷಗಳ ನಂತರ ಅಂದ್ರೆ ಇದೀಗ ಅವತ್ತಿನ 12 ವರ್ಷದ ಕುರಿಗಾಯಿ ಬಾಲಕನಿಗೆ ಈಗ 33ರ ಹರೆಯ. ಆರುವರೆ ಅಡಿ ಎತ್ತರದ ಅಜಾನುಬಾಹು. ಈ ಯುವಕನನ್ನು ಇಂದು ಆ ದೇಶವೇ ಹೆಮ್ಮೆಯಿಂದ ಆರಾಧಿಸುತ್ತಿದೆ. ಅವನ ಫುಟ್‍ಬಾಲ್ ಆಟದ ವೈಖರಿಯನ್ನು ಮೆಚ್ಚಿ ಕೊಂಡಾಡುತ್ತಿದೆ. ದೇಶದ ಕ್ರೀಡಾಪಟುಗಳಿಗೆ ಆತನೇ ಸ್ಪೂರ್ತಿಯ ಚಿಲುಮೆ. ಆತನ ಬದುಕಿನ ಚಿತ್ರಣ ಎಲ್ಲರಿಗೂ ಮಾದರಿಯಾಗುವಂತಹುದ್ದು. ಕುರಿ ಮೇಯಿಸುವುದು ಕುಟುಂಬದ ಕಾಯಕವಾದ್ರೂ ಫುಟ್‍ಬಾಲ್ ಸೆಳೆತ ಆತನ ಬದುಕಿನ ಚಿತ್ರಣವನ್ನೇ ಬದಲಾಯಿಸಿತ್ತು. ಅಪ್ಪನ ವಿರೋಧ ಲೆಕ್ಕಿಸದೇ ಇಂದು ತಾನು ಅಂದುಕೊಂಡಿರುವುದನ್ನು ಸಾಧಿಸಿದ್ದಾನೆ.

ಹೌದು, ಆತನ ಹೆಸರು ಆಲಿರೇಝಾ ಬೇರಾನ್ ವಾಂಡ್. ಇರಾನ್ ಫುಟ್‍ಬಾಲ್ ತಂಡದ ಗೋಲು ಕೀಪರ್. ಹುಟ್ಟಿದ್ದು ಸೆಪ್ಟಂಬರ್ 21. 1992ರಲ್ಲಿ. ಇರಾನ್‍ನ ಲೊರೆಸ್ಟಾನ್ ಪ್ರಾಂತ್ಯದ ಸಾರಬ್ ಇ ಯಸ್ ಎಂಬ ಸಣ್ಣ ಗ್ರಾಮದಲ್ಲಿ. ಅಷ್ಟಕ್ಕೂ ಅಂದು ಮನೆ ಬಿಟ್ಟು ಓಡಿ ಹೋಗಿದ್ದ ಆಲಿರೇಝಾ ಆಶ್ರಯ ಪಡೆದುಕೊಂಡಿದ್ದು ಟೆಹ್ರಾನ್‍ನಲ್ಲಿ. ಅಲ್ಲಿ ಸ್ಥಳೀಯ ಕ್ಲಬ್‍ಗಳ ಪರವಾಗಿ ಆಡುತ್ತಿದ್ದ ಆಲಿರೇಝ್ ಆರಂಭದಲ್ಲಿ ಸ್ಟ್ರೈಕರ್ ಆಗಿದ್ದ. ಬಳಿಕ ಗೋಲು ಕೀಪಿಂಗ್ ಮಾಡಲು ಶುರು ಮಾಡಿದ್ದ. ಇದೀಗ ಫುಟ್‍ಬಾಲ್ ಜಗತ್ತಿನ ಶ್ರೇಷ್ಠ ಗೋಲು ಕೀಪರ್‍ಗಳಲ್ಲಿ ಒಬ್ಬನಾಗಿದ್ದಾನೆ. ಅಂದು ಟೈಂಪಾಸ್‍ಗಾಗಿ ದಾಲ್ ಪರಾನ್ ಆಡುತ್ತಿದ್ದ ಅಲಿರೆಝಾ, ಇಂದು ತನ್ನ ಕೈಯಿಂದಲೇ ಚೆಂಡನ್ನು ಫುಟ್‍ಬಾಲ್ ಅಂಗಣದ ಮಧ್ಯಭಾಗದ ತನಕ ಎಸೆಯುತ್ತಾನೆ. 2016ರಲ್ಲಿ ದಕ್ಷಿಣ ಕೊರಿಯಾ ವಿರುದ್ದದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪೆನಾಲ್ಟಿ ಬಾಕ್ಸ್‍ನಿಂದ ಕೈಯಿಂದಲೇ ಚೆಂಡನ್ನು 61 ಮೀಟರ್ ದೂರ ಎಸೆದು ದಾಖಲೆ ಕೂಡ ನಿರ್ಮಿಸಿದ್ದಾನೆ. ಹೀಗೆ ಶುರುವಾದ ಆಲಿರೇಝಾ ಅವರ ಫುಟ್‍ಬಾಲ್ ಜರ್ನಿ ಇಂದು ಅಮೆರಿಕಾ, ಮೆಕ್ಸಿಕೋ, ಕೆನಡಾ ಆತಿಥ್ಯದ ಫಿಫಾ ವಿಶ್ವಕಪ್ ಟೂರ್ನಿಯ ತನಕ ಬಂದು ನಿಂತಿದೆ.

ಇರಾನ್ ತಂಡದ ವಿವಿಧ ವಯೋಮಿತಿ ಟೂರ್ನಿಗಳಲ್ಲಿ ಗಮನ ಸೆಳೆದ ಆಲಿರೇಝಾ, 19 ವಯೋಮಿತಿ ಫಿಫಾ ವಿಶ್ವಕಪ್ ಮತ್ತು 20 ವಯೋಮಿತಿಯ ಇರಾನ್ ತಂಡದಲ್ಲೂ ಸ್ಥಾನಪಡೆದುಕೊಂಡಿದ್ದ. 2014ರಲ್ಲಿ ತನ್ನ 22ರ ಹರೆಯದಲ್ಲಿಯೇ ಇರಾನ್ ರಾಷ್ಟ್ರೀಯ ತಂಡವನ್ನು ಸೇರಿಕೊಂಡ. ಅನೇಕ ಟೂರ್ನಿ ಮತ್ತು ಕ್ಲಬ್ ಲೀಗ್‍ಗಳಲ್ಲಿ ಗಮನ ಸೆಳೆದ ಆಲಿರೇಝಾ ರಷ್ಯಾ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ಕೂಡ ಸಫಲನಾಗಿದ್ದ. ಅದ್ಭುತ ಗೋಲು ಕೀಪಿಂಗ್ ಮೂಲಕ ಗಮನ ಕೂಡ ಸೆಳೆದಿದ್ದ. ಅದರಲ್ಲೂ ಕ್ರಿಸ್ಟಿಯಾನೋ ರೋನಾಲ್ಡೋ ಅವರ ಪೆನಾಲ್ಟಿ ಕಿಕ್ ಅನ್ನು ತಡೆದ ರೀತಿಗೆ ಫುಟ್‍ಬಾಲ್ ಜಗತ್ತು ಅಚ್ಚರಿಗೊಂಡಿತ್ತು. ಬಳಿಕ 2022 ಕತಾರ್ ಫಿಫಾ ವಿಶ್ವಕಪ್, ಇದೀಗ 2026ರ ಫಿಫಾ ವಿಶ್ವಕಪ್‍ನಲ್ಲೂ ಗಮನ ಸೆಳೆಯುತ್ತಿದ್ದಾನೆ.

ಒಟ್ಟಿನಲ್ಲಿ ಅಂದು ದುಡ್ಡಿಲ್ಲದೆ, ಭಿಕಾರಿಯಾಗಿ ಊಟ ತಿಂಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದ ಆಲಿರೇಝಾ ಬೇರಾನ್‍ವಾಂಡ್‍ಗೆ ಫುಟ್‍ಬಾಲ್ ಆಟ ಮಾತ್ರ ಕೈ ಬಿಡಲಿಲ್ಲ. ಹೆತ್ತವರ ಪ್ರೀತಿಯನ್ನು ಕಳೆದುಕೊಂಡ್ರೂ ಫುಟ್‍ಬಾಲ್ ಪ್ರೀತಿಯನ್ನು ಒಲಿಸಿಕೊಳ್ಳಲು ಯಶಸ್ವಿಯಾದ. ಅಂದು ಕುರಿಗಾಯಿ ಬಾಲಕ. ಇಂದು ಇರಾನ್ ಫುಟ್‍ಬಾಲ್ ತಂಡದ ಸೂಪರ್ ಸ್ಟಾರ್ ಗೋಲು ಕೀಪರ್. ಅಂದು ನಿರ್ಗತಿಕ ಅಂತ ಭಿಕ್ಷೆ ಹಾಕಿದವರು ಇಂದು ಆಲಿರೇಝಾನ  ಸಾಧನೆಗೆ ಜೈಕಾರ ಹಾಕುತ್ತಿದ್ದಾರೆ. ಅಂದು ತುತ್ತು ಅನ್ನಕ್ಕಾಗಿ ಬೀದಿ ಬದಿ ಕ್ಲೀನ್ ಮಾಡ್ಕೊಂಡು ಬದುಕು ಸಾಗಿಸುತ್ತಿದ್ದ ಆಲಿರೇಝಾ ಇಂದು ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ. ಕೇವಲ 20 ವರ್ಷಗಳಲ್ಲಿ ಆಲಿರೇಝಾ ಬೇರಾನ್‍ವಾಂಡ್‍ಗೆ ನೇಮ್ -ಫೇಮ್ ಹೀಗೆ ಎಲ್ಲವನ್ನೂ ಫುಟ್‍ಬಾಲ್ ಕೊಟ್ಟಿದೆ. ಲೈಫ್ ಈಸ್ ಬ್ಯೂಟಿಫುಲ್ ಅಲ್ವಾ..!

ಸನತ್ ರೈ

 

Tags: #Alireza Beiranvand#Cristiano Ronaldo penalty save#Inspiring Football Story#Iran Goalkeeper#Longest football throw record#saakshatv#Shepherd to Footballer#Sports motivation story
ShareTweetSendShare
Join us on:

Related Posts

kiccha-sudeep-gives-stern-warning-to-modern-manju-and-agni-boys-in-bigg-boss-kannada-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

by admin
September 21, 2026
0

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್ ಒಳಗೊಂಡ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ...

chikkanna-starrer-laxmiputra-ammana-haadu-released-actress-tara-emotional

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

by admin
September 21, 2026
0

ಬೆಂಗಳೂರು: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡ...

devi-mahatme-kannada-movie-directed-by-nagaraj-somayaji-releasing-on-december-4

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

by admin
September 21, 2026
0

ಬೆಂಗಳೂರು: ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಾಯಾಜಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಟೀಸರ್ ಮೂಲಕ ಪ್ರೇಕ್ಷಕರ ಗಮನ...

allu-arjun-atlee-raka-movie-creates-guinness-world-record-in-motion-capture

ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ: ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ – ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!

by admin
September 21, 2026
0

ಹೈದರಾಬಾದ್: ಭಾರತೀಯ ಚಿತ್ರರಂಗದ ತಾಂತ್ರಿಕ ಪಯಣದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ, ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದ...

meghana-gaonkar-plays-sadhvi-role-in-anil-shetty-lambodhara-2-movie

ಅನಿಲ್‌ ಶೆಟ್ಟಿ ನಟನೆಯ ‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್

by admin
September 21, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ಮೇಘನಾ ಗಾಂವ್ಕರ್ ಮತ್ತೊಮ್ಮೆ ವಿಭಿನ್ನ ಹಾಗೂ ಸವಾಲಿನ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಖ್ಯಾತ ನಿರ್ದೇಶಕ ‘ಸಿಂಪಲ್’ ಸುನಿ ಆ್ಯಕ್ಷನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram