ಯುಎಇಯ ಎನ್.ಎಮ್.ಸಿ ಹೆಲ್ತ್ ಸಂಸ್ಥೆಯ ಬೋರ್ಡ್ ಗೆ ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ರಾಜೀನಾಮೆ ನೀಡಿದ್ದಾರೆ.
ಯುಎಇಯಲ್ಲಿ ತಾವೇ ಸ್ಥಾಪಿಸಿರುವ ಎನ್.ಎಮ್.ಸಿ ಹೆಲ್ತ್ ಸಂಸ್ಥೆಯ ಕಾರ್ಯನಿರ್ವಾಹಕ ಸ್ಥಾನಕ್ಕೆ ಬಿ.ಆರ್. ಶೆಟ್ಟಿ ರಾಜೀನಾಮೆ ಸಲ್ಲಿಸಿದ್ದು, ಎಚ್.ಜೆ. ಮಾರ್ಕ್ ಟಾಮ್‌ಪ್ಕಿನ್ಸ್ ಕಂಪನಿಯ ಏಕೈಕ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಎನ್‌ಎಂಸಿ ಹೆಲ್ತ್ ತಿಳಿಸಿದೆ.
ಎನ್‌ಎಂಸಿಯ ಷೇರುಗಳ ವಹಿವಾಟು ನಡೆಯುತ್ತಿರುವ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸೋಮವಾರ, ಅದರ ಮುಖ್ಯ ಹೂಡಿಕೆ ಅಧಿಕಾರಿ ಹನಿ ಬುಟ್ಟಿಖಿ ಮತ್ತು ಇನ್ನೊಬ್ಬ ನಿರ್ದೇಶಕರು ಅಬ್ದುಲ್ರಹ್ಮಾನ್ ಬಸದ್ದಿಕ್ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.
2014 ರ ಫೆಬ್ರವರಿಯಲ್ಲಿ ನಿರ್ದೇಶಕರಾಗಿ ನೇಮಕಗೊಂಡಿದ್ದ ಅಬ್ದುಲ್ರಹ್ಮಾನ್ ಬಸದ್ದಿಕ್ ಮತ್ತು 2017 ರ ಜೂನ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಮುಖ್ಯ ಹೂಡಿಕೆ ಅಧಿಕಾರಿಯಾಗಿ ನೇಮಕಗೊಂಡ ಹನಿ ಬುಟ್ಟಿಖಿರ ಜೊತೆಗೆ ಬಿ.ಆರ್.ಶೆಟ್ಟಿಯವರು ಫೆಬ್ರವರಿ 16 ರಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ.
ಈ ವರ್ಷದ ಎಫ್‌ಟಿಎಸ್‌ಇ -100 ಸೂಚ್ಯಂಕದಲ್ಲಿ ಕೆಟ್ಟ ಪ್ರದರ್ಶನ ನೀಡಿದ ಎನ್‌ಎಂಸಿ ಷೇರು ಸೋಮವಾರ ಬೆಳಿಗ್ಗೆ ಶೇ 9.2 ರಷ್ಟು ಕುಸಿದು ನಂತರ ಮತ್ತೆ ಏರಿತು.
1975 ರಲ್ಲಿ ಎನ್‌ಎಂಸಿಯನ್ನು ಸ್ಥಾಪಿಸಿದ ಶೆಟ್ಟಿ, ಫಿನಾಬ್ಲರ್ ಸೇರಿದಂತೆ ಇತರ ಉದ್ಯಮಗಳೊಂದಿಗೆ ಸಹ ತೊಡಗಿಸಿಕೊಂಡಿದ್ದಾರೆ, ಇದು ಯುಎಇ ಎಕ್ಸ್‌ಚೇಂಜ್, ಟ್ರಾವೆಲೆಕ್ಸ್ ಮತ್ತು ಎಕ್ಸ್‌ಪ್ರೆಸ್ ಮನಿ, ನಿಯೋ ಫಾರ್ಮಾ, ಬಿಆರ್‌ಎಸ್ ವೆಂಚರ್ಸ್ ಮತ್ತು ಬಿಆರ್ ಲೈಫ್ ಅನ್ನು ಹೊಂದಿದೆ.
ಯುಎಇಯಲ್ಲಿ ಅತಿದೊಡ್ಡ ಆರೋಗ್ಯ ಸಂರಕ್ಷಣಾ ಜಾಲವನ್ನು ನಿರ್ವಹಿಸುತ್ತಿರುವ ಎನ್‌ಎಂಸಿ, ಕಳೆದ ವರ್ಷ ಯುಎಸ್ ಶಾರ್ಟ್ ಸೆಲ್ಲರ್ ಮಡ್ಡಿ ವಾಟರ್ಸ್ ಕಂಪನಿಯನ್ನು ಗುರಿಯಾಗಿಸಿಕೊಂಡಾಗಿನಿಂದಲೂ ತಪ್ಪಾದ ಹಣಕಾಸು ಮತ್ತು ಪ್ರಮುಖ ಷೇರುದಾರರ ಶೇರುಗಳ ಬಗ್ಗೆ ತಪ್ಪು ಮಾಹಿತಿ ನೀಡಿದರೆಂಬ ಆರೋಪ ಎದುರಿಸುತ್ತಿದೆ.
ಶೆಟ್ಟಿಯವರ ಯುಎಇ ಮತ್ತು ಭಾರತದಲ್ಲಿನ ಇತರ ಉದ್ಯಮಗಳಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಯುಎಇ ಎಕ್ಸ್‌ಚೇಂಜ ಅಧ್ಯಕ್ಷರಾಗಿ ಬಿ.ಆರ್. ಶೆಟ್ಟಿ ಅವರೇ ಮುಂದುವರಿಯುತ್ತಾರೆ ಎಂದು ಫುರ್ಸಾ ಕನ್ಸಲ್ಟಿಂಗ್ ಸಿಇಒ ಮತ್ತು ವ್ಯವಸ್ಥಾಪಕ ಪಾಲುದಾರ ಅಬ್ದುಲ್ ಮೊಯಿಜ್ ಖಾನ್ ಹೇಳಿದ್ದಾರೆ.
ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?
ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...








