Yadgiri | ಭಾರಿ ಮಳೆ – ಸಿಡಿಲು ಬಡಿದು ಜಾನುವಾರು ಸಾವು
ಯಾದಗಿರಿ : ಸಿಡಿಲು ಬಡಿದು ಜಾನುವಾರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಚಾಮನಾಳ ಗ್ರಾಮದಲ್ಲಿ ನಡದಿದೆ.
ಜಿಲ್ಲೆಯಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಅದರಂತೆ ಚಾಮನಾಳ ಗ್ರಾಮದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಎರಡು ಎತ್ತುಗಳು ಹಾಗೂ ಎಮ್ಮೆ, ಆಕಳು ಮೃತಪಟ್ಟಿವೆ.
ರೈತ ಸಿದ್ರಾಮಪ್ಪ ಎನ್ನುವರಿಗೆ ಸೇರಿದ ಎತ್ತುಗಳು ಇವಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.








