Mandya | ಕೆ.ಆರ್.ಪೇಟೆಯ KSRTC ಬಸ್ ನಿಲ್ದಾಣ ಸಂಪೂರ್ಣ ಜಲಾವೃತ
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ನಿನ್ನೆ ರಾತ್ರಿ ಮತ್ತೆ ವರುಣ ಆರ್ಭಟಿಸಿದ್ದು, ಕೆ.ಆರ್.ಪೇಟೆಯ KSRTC ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದೆ.
ನಿಲ್ದಾಣದಲ್ಲಿನ ಕಚೇರಿ ಸೇರಿ ಅಂಗಡಿ, ಹೋಟೇಲ್, ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ.

ನಿಲ್ದಾಣದ ಬೈಕ್ ಸ್ಟಾಂಡ್ ನಲ್ಲಿ 50 ಹೆಚ್ಚು ಬೈಕ್ ಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಈ ಮಳೆ ನೀರಿನಿಂದಾಗಿಬಸ್ ನಿಲ್ದಾಣ ಕೆರೆಯಂತಾಗಿದ್ದು, ಬಸ್ ಗಳು ಮತ್ತು ಪ್ರಯಾಣಿಕರು ಬರಲಾಗದೆ ಪರದಾಟ ನಡೆಸುತ್ತಿವೆ.
ಅಂದಹಾಗೆ ಪ್ರತಿ ಬಾರೀ ಮಳೆ ಬಂದಾಗ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಳ್ಳತ್ತಲೇ ಇರುತ್ತದೆ.
ಹೀಗಿದ್ದರೂ ಬಸ್ ನಿಲ್ದಾಣಕ್ಕೆ ಶಾಶ್ವತ ಪರಿಹಾರ ದೊರಕಿಸಲು ಪುರಸಭೆ ವಿಫಲವಾಗಿದೆ.








