ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್ ಫೋನ್ – Lava Yuva Pro ಶೀಘ್ರದಲ್ಲೇ ಲಭ್ಯ…
ಲಾವ ಭಾರತದಲ್ಲಿ ಅಗ್ಗದ 4ಜಿ ಸ್ಮಾರ್ಟ್ ಪೋನ್ Lava Yuva Pro ಬಿಡುಗಡೆ ಮಾಡುತ್ತಿದೆ. ಅದು ಸಹ ಆಕರ್ಷಕ ಫೀಚರ್ರ್ಸ್ ಗಳೊಂದಿಗೆ ಬಿಡುಗೆಡಯಾಗುತ್ತಿದೆ. Lava Yuva Pro ಶೀಘ್ರದಲ್ಲೇ ಕೇವಲ ₹7,800 ಗೆ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ.
Lava Yuva Pro ಎರಡು ಸಿಮ್ ಸ್ಲಾಟ್ಗಳನ್ನು ಹೊಂದಿದೆ ಮತ್ತು ಮೆಮೋರಿ ಹೆಚ್ಚಿಸಿಕೊಳ್ಳಲು ಮೈಕ್ರೋ SD ಸ್ಲಾಟ್ ನಿಡಲಾಗಿದೆ. ಫೋನ್ ನಲ್ಲಿ 32GB ಇಂಟರ್ನಲ್ ಸ್ಟೋರೇಜ್ ಮತ್ತು 3GB RAM ಅಳವಡಿಸಲಾಗಿದೆ.
MediaTek Helio ಚಿಪ್ಸೆಟ್ ಪ್ರೊಸೆಸರ್ ಇದ್ದುಯ Android 12 ಆಪರೇಟಿಂ ಸಿಸ್ಟಮ್ ನಿಂದ ರನ್ ಆಗುತ್ತದೆ. HD+ ರೆಸಲ್ಯೂಶನ್ (20:9) ನಲ್ಲಿ 6.52 “ಡಿಸ್ಪ್ಲೇ ಕೊಟ್ಟಿದ್ದಾರೆ. ಮುಂಬಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ, ಹಿಂಬಾಗದಲ್ಲಿ 13MP ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಮೊಬೈಲ್ ಅನ್ ಲಾಕ್ ಜೊತೆಗೆ ಫಿಂಗರ್ಪ್ರಿಂಟ್ ರೀಡರ್ ಸಹ ನೀಡಲಾಗಿದೆ.
ಯುವ ಪ್ರೊ ನಲ್ಲಿ 5,000mAh ಬ್ಯಾಟರಿ ನೀಡಲಾಗಿದೆ. ಆದರೆ ಚಾರ್ಜಿಂಗ್ ನಿಧಾನವಾಗಿ ಆಗಲಿದೆ. 10W ನಲ್ಲಿ ಫೋನ್ ಬ್ಯಾಟರಿ 100% ತಲುಪಲು 3 ಗಂಟೆಗಳ ಅಗತ್ಯವಿದೆ.
Attractive Smartphone at Low Price – Lava Yuva Pro Available Soon…








