ADVERTISEMENT
Monday, November 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಚುನಾವಣೆಗೆ ಮುನ್ನ ಗೌರವಧನ ಹೆಚ್ಚಳದ ಭರವಸೆ, ಆಶಾ ಕಾರ್ಯಕರ್ತೆಯರಿಗೆ ಮೋಸ ಮಾಡಿದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ

admin by admin
November 23, 2026
in Newsbeat, State, ರಾಜ್ಯ
r-ashoka-congress-asha-workers-honorarium-protest-karnataka-government

r-ashoka-congress-asha-workers-honorarium-protest-karnataka-government

Share on FacebookShare on TwitterShare on WhatsappShare on Telegram

ಕಾಂಗ್ರೆಸ್‌ ಸಮಿತಿಗಳಿಗೆ ಕೋಟ್ಯಂತರ ಖರ್ಚು, ರೈತರಿಗೆ ಆಶಾ ಕಾರ್ಯಕರ್ತೆಯರಿಗೆ ಹಣವಿಲ್ಲ

ಬೆಂಗಳೂರು, ನವೆಂಬರ್‌ 23

Related posts

r-ashoka-raises-concern-tungabhadra-water-rice-price-hike-karnataka

ದಿವಾಳಿ ಸರ್ಕಾರದ ಬಾಕಿಗೆ ಹೆದರಿ ಯಾವ ಔಷಧ ಕಂಪನಿಗಳು ಸರಬರಾಜು ಮಾಡಲು ಮುಂದೆ ಬರುತ್ತಿಲ್ಲ!

November 23, 2026
melukote-darshan-puttannaiah-agriculture-dairy-farming-facility-distribution

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೃಷಿ-ಹೈನುಗಾರಿಕೆಗೆ ಹೊಸ ಚೈತನ್ಯ

November 23, 2026

ಚುನಾವಣೆಗೆ ಮುನ್ನ ಕಾಂಗ್ರೆಸ್‌ ನಾಯಕರು ಆಶಾ ಕಾರ್ಯಕರ್ತೆಯರನ್ನು ಕರೆದು ಮಾತಾಡಿ ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದರು. ಈಗ ಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಕುಳಿತರೂ ಸ್ಪಂದಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯುಕರ್ತೆಯರು ಕೊರೆಯುವ ಚಳಿಯಲ್ಲಿ ಮಕ್ಕಳೊಂದಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಂದಿಸಿಲ್ಲ. ತಾಯಂದಿರಿಗೆ ಹಾಲು ಕುಡಿಸುವ ವ್ಯವಸ್ಥೆಯಾಗಲೀ, ಶೌಚಾಲಯವಾಗಲೀ, ಕುಡಿಯುವ ನೀರಿನ ವ್ಯವಸ್ಥೆಯಾಗಲೀ ಯಾವುದನ್ನೂ ಮಾಡಿಲ್ಲ. 10 ಸಾವಿರ ಮಹಿಳೆಯರಿಗೆ ಕೇವಲ ಎಂಟು ಶೌಚಾಲಯವಿದೆ. ಇಂತಹ ಸಮಯದಲ್ಲಿ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಹಬ್ಬ ಮಾಡಲು ಮುಂದಾಗಿದ್ದಾರೆ. ಅವರು ಗೌರವಧನಕ್ಕಾಗಿ ಆಗ್ರಹಿಸುತ್ತಿದ್ದಾರೆ. ರೈತರಿಗೆ ಬರ ಪರಿಹಾರ ನೀಡಿಲ್ಲ. ಆಡಂಬರದ ದಸರಾ ಬೇಡವೆಂದರೂ ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಯಿತು. ಜೊತೆಗೆ ಸಿಎಂ ನಿವಾಸ, ಕಚೇರಿಗೆ ಖರ್ಚು ಮಾಡಲಾಗಿದೆ. ಚಳಿಯಿಂದಾಗಿ ಮಹಿಳೆಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವರಿಗೆ ಮೊಬೈಲ್‌ ಕ್ಲಿನಿಕ್‌ ಆರಂಭಿಸಬಹುದಿತ್ತು. ಅವರಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ಸರಕಾರವೇ ನೇರ ಕಾರಣ ಎಂದರು.

ಚುನಾವಣೆಗೆ ಮೊದಲು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಮಹಿಳೆಯರ ಪರವೆಂದು ಹೇಳಲಾಗಿತ್ತು. ಆ ಸಮಯದಲ್ಲಿ ಆಶಾ ಕಾರ್ಯಕರ್ತೆಯರನ್ನು ಕರೆದು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಮನವಿ ಮಾಡಲಾಗಿತ್ತು. ಪ್ರಿಯಾಂಕ ಗಾಂಧಿ ಗೌರವಧನ ಹೆಚ್ಚಿಸುವುದಾಗಿ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದರು. ನುಡಿದಂತೆ ನಡೆಯುವ ಬಗ್ಗೆ ಜಾಹೀರಾತು ನೀಡಿ ಖರ್ಚು ಮಾಡಿದರೂ ಗೌರವಧನಕ್ಕಾಗಿ ಏನೂ ಖರ್ಚು ಮಾಡಿಲ್ಲ. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತರಿಗೆ 15,000 ರೂ. ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ. ಅವರು ಕೂಡ ಇನ್ನು ಹೋರಾಟಕ್ಕೆ ಇಳಿಯುತ್ತಾರೆ ಎಂದರು.

ಗಂಜಿಕೇಂದ್ರಗಳಿಗೆ ಖರ್ಚು

ಭಾರತ್‌ ಜೋಡೋ ಸಂಘಗಳು ಎಂದರೆ ಕಾಂಗ್ರೆಸ್‌ನ ಗಂಜಿಕೇಂದ್ರಗಳಾಗಿವೆ. ಸಚಿವರು ಆ ಸಂಘಗಳಲ್ಲಿ ಕಾಂಗ್ರೆಸ್‌ನವರು ಮಾತ್ರ ಇರಬೇಕು ಎಂದು ಸೂಚಿಸಿದ್ದಾರೆ. ಇದರ ಜೊತೆಗೆ ಗ್ಯಾರಂಟಿ ಅನುಷ್ಠಾನ ಸಮಿತಿಗೂ ಕೋಟ್ಯಂತರ ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆಯ ಹಣವನ್ನು ಪಕ್ಷದ ಕಾರ್ಯಕರ್ತರಿಗೆ ಖರ್ಚು ಮಾಡಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದಾಗಲೂ ಮುಖ್ಯಮಂತ್ರಿ ವಿದೇಶ ಪ್ರವಾಸ ಮಾಡಿದ್ದಾರೆ. ಇತ್ತ ಬರಗಾಲದಲ್ಲೂ ಸಚಿವರು ಹಬ್ಬ ಮಾಡಲು ಮುಂದಾಗಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಆಡಂಬರ ಮಾಡಬಾರದು ಎಂದರು.

ಗೃಹಲಕ್ಷ್ಮಿ ಯೋಜನೆಯನ್ನು ಈಗ ಬಿಪಿಎಲ್‌ಗೆ ಸೀಮಿತಗೊಳಿಸಲಾಗಿದೆ. ಮೂರೂವರೆ ವರ್ಷದಲ್ಲಿ ಒಂದು ಕುಟುಂಬಕ್ಕೆ 84,000 ರೂ. ನೀಡಬೇಕಿತ್ತು. ಆದರೆ 30-35 ಸಾವಿರ ರೂ. ನೀಡಲಾಗಿದೆ. ಅಂದರೆ ಒಬ್ಬರಿಗೆ ಒಂದು ಬಾರಿ ನೀಡಿದರೆ, ಮತ್ತೆ ಅವರಿಗೆ ಹಣ ನೀಡುವುದಿಲ್ಲ ಎಂದರು.

ಕೇಂದ್ರಕ್ಕೆ ಯಾಕೆ ಬರಬೇಕು?

ಕಸ್ತೂರಿ ರಂಗನ್‌ ವರದಿ ವಿಚಾರದಲ್ಲಿ ನಮ್ಮ ಸಲಹೆಗಳನ್ನು ನೀಡಲಾಗಿದೆ. ಆದರೆ ಬರಗಾಲದಲ್ಲಿ ರೈತರಿಗೆ ಈ ಸರ್ಕಾರ ಬಿಡಿಗಾಸು ನೀಡಿದೆ. ಅಂದಮೇಲೆ ಅದಕ್ಕಾಗಿ ನಾವ್ಯಾಕೆ ಇವರೊಂದಿಗೆ ಕೇಂದ್ರ ಸರ್ಕಾರದ ಬಳಿ ಹೋಗಿ ಮನವಿ ಮಾಡಬೇಕು? ಬಿಜೆಪಿ ಅವಧಿಯಲ್ಲಿ ಎನ್‌ಡಿಆರ್‌ಎಫ್‌ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಆಗ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಏನೇ ಸಮಸ್ಯೆ ಬಂದರೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಜನರು ಪಾಠ ಕಲಿಸಿದ್ದಾರೆ. ಮುಂದೆಯೂ ಕಲಿಸುತ್ತಾರೆ ಎಂದರು.

ರಾಜ್ಯದಲ್ಲಿ ಮತಾಂತರ ಜಾಸ್ತಿಯಾಗಿದೆ. ಲವ್‌ ಜಿಹಾದ್‌ ಹೆಸರಲ್ಲಿ ಹಿಂದೂಗಳನ್ನು, ಆಮಿಷ ನೀಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಕಾನೂನನ್ನು ರದ್ದುಪಡಿಸಿದರೆ ಕಾಂಗ್ರೆಸ್‌ ಮತಾಂತರದ ಪರ ಎಂದು ಗೊತ್ತಾಗುತ್ತದೆ. ಈಗಾಗಲೇ ಜಗತ್ತಿನಲ್ಲಿ ಯಾವ್ಯಾವ ಧರ್ಮಗಳ ಜನರ ಸಂಖ್ಯೆ ಹೆಚ್ಚಲಿದೆ ಎಂಬ ಒಂದು ವರದಿ ಬಂದಿದೆ. ಈ ಕಾನೂನು ರದ್ದು ಮಾಡಿದರೆ ಹಿಂದೂಗಳಿಗೆ ಕಾಂಗ್ರೆಸ್‌ನ ನೈಜತೆ ತಿಳಿಯುತ್ತದೆ. ಗೋ ಹತ್ಯೆ ನಿಷೇಧ ಕಾನೂನು ಕೂಡ ವಾಪಸ್‌ ಪಡೆಯಬಾರದು. ಈ ಸರ್ಕಾರ ಹಾಲಿನ ಬದಲು ಆಲ್ಕೋಹಾಲ್‌ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಕಾನೂನುಗಳನ್ನು ರದ್ದು ಮಾಡಲು ಅಧಿವೇಶನದಲ್ಲಿ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ಕೆಪಿಎಸ್‌ಸಿ ಹಗರಣದ ದಿಕ್ಕನ್ನು ಸರ್ಕಾರ ಬದಲಿಸಿದೆ. ಯಾವುದೇ ಕಾಲದಲ್ಲಾದರೂ ಇದನ್ನು ಸಿಬಿಐ ತನಿಖೆಗೆ ನೀಡಬೇಕು. ತಪ್ಪಿತಸ್ಥರನ್ನು ಜೈಲಿಗೆ ಕಳಿಸದೆ ಎಸ್‌ಐಟಿ ತನಿಖೆಯನ್ನು ದದಾರಿ ತಪ್ಪಿಸಲಾಗಿದೆ. ಸ್ಟಿಂಗ್‌ ಆಪರೇಶನ್‌ ಪ್ರಕರಣದಂತೆಯೇ ಇಲ್ಲೂ ಎಲ್ಲರಿಗೂ ಕ್ಲೀನ್‌ ಚಿಟ್‌ ನೀಡಲಾಗುತ್ತಿದೆ. ಎಸ್‌ಐಟಿ ಎಂದರೆ ಕ್ಲೀನ್‌ ಚಿಟ್‌ ನೀಡುವ ತಂಡ. ಕೆಪಿಎಸ್‌ಸಿ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ಕಾಂಗ್ರೆಸ್‌ನ ಮೂವರು ಶಾಸಕರು ಮೊದಲು ರಾಜೀನಾಮೆ ಕೊಟ್ಟಿದ್ದರೆ ಆನೆಗಳೇ ದೂರ ಹೋಗುತ್ತಿದ್ದವು. ಸರ್ಕಾರ ಎಲ್ಲರನ್ನೂ ಕರೆದು ಚರ್ಚೆ ಮಾಡಬೇಕಿತ್ತು. ಏಕಾಏಕಿ ಆನೆಗಳನ್ನು ಓಡಿಸಿದರೆ ಅವುಗಳಾದರೂ ಎಲ್ಲಿಗೆ ಹೋಗುತ್ತವೆ. ಹೀಗೆ ಯಾಕೆ ಬಂದಿವೆ ಎಂಬುದನ್ನು ಅರಣ್ಯ ಇಲಾಖೆ ತಿಳಿಸಿಲ್ಲ. ನೀರಿನ ಸಮಸ್ಯೆ ಇದ್ದರೆ ಅದಕ್ಕೆ ಯಾವ ವ್ಯವಸ್ಥೆ ಮಾಡಲಾಗಿದೆ? ಕಾರಿಡಾರ್‌ ಬಿಟ್ಟು ಹೊರಗೆ ಬಂದಿವೆ ಎಂದರೆ ಅಲ್ಲಿ ಏನು ಸಮಸ್ಯೆಯಾಗಿದೆ ಎಂದು ನೋಡಬೇಕಿತ್ತು. ಸರ್ಕಾರದ ತಪ್ಪನ್ನು ಆನೆಗಳ ಮೇಲೆ ಹೇರಲಾಗುತ್ತಿದೆ. ಇದರಿಂದ ಜನಪ್ರತಿನಿಧಿಗಳ ಕಚ್ಚಾಟಕ್ಕೆ ದಾರಿಯಾಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಹಾಗೂ ಅಧಿವೇಶನದಲ್ಲಿ ಚರ್ಚಿಸುವ ಕುರಿತು ನ.26 ರಂದು ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್‌ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ShareTweetSendShare
Join us on:

Related Posts

r-ashoka-raises-concern-tungabhadra-water-rice-price-hike-karnataka

ದಿವಾಳಿ ಸರ್ಕಾರದ ಬಾಕಿಗೆ ಹೆದರಿ ಯಾವ ಔಷಧ ಕಂಪನಿಗಳು ಸರಬರಾಜು ಮಾಡಲು ಮುಂದೆ ಬರುತ್ತಿಲ್ಲ!

by admin
November 23, 2026
0

ಇದು ಪಾಪರ್ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಎಫೆಕ್ಟ್! ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರೈಸಿದ ಔಷಧಗಳ ಬಿಲ್‌ಗಳಿಗೆ...

melukote-darshan-puttannaiah-agriculture-dairy-farming-facility-distribution

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೃಷಿ-ಹೈನುಗಾರಿಕೆಗೆ ಹೊಸ ಚೈತನ್ಯ

by admin
November 23, 2026
0

  ಮಂಡ್ಯ: ರೈತರನ್ನು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸದೃಢರನ್ನಾಗಿ ಮಾಡಲು ಕಟಿಬದ್ಧರಾಗಿರುವ ಮೇಲುಕೋಟೆ ಕ್ಷೇತ್ರದ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರ ನಿರಂತರ ಶ್ರಮದಿಂದ ಕ್ಷೇತ್ರದಲ್ಲಿ ಕೃಷಿ...

goudagere-rainwater-harvesting-awareness-programme-darshan-puttannaiah

ಗೌಡಗೆರೆ ಗ್ರಾಮದಲ್ಲಿ ಮಳೆ ನೀರು ಕೊಯ್ಲು ಜಾಗೃತಿ – ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಮೈರಾಡ ಸಂಸ್ಥೆಯಿಂದ ಆಯೋಜನೆ

by admin
November 23, 2026
0

ಮಂಡ್ಯ: ಮಾಣಿಕ್ಯನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗೌಡಗೆರೆ ಗ್ರಾಮದಲ್ಲಿ ದಿನಾಂಕ 18.11.2026 ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಪುಟ್ಟಣ್ಣಯ್ಯ ಫೌಂಡೇಶನ್ ಹಾಗೂ ಮೈರಾಡ (MYRADA) ಸಂಸ್ಥೆಯ ಸಹಯೋಗದೊಂದಿಗೆ...

ರೈತರಿಗೆ ಆಗ್ರೋ ಫಾರೆಸ್ಟ್ರಿ ತರಬೇತಿ – ಪರಿಸರ ಸಂರಕ್ಷಣೆ ಜೊತೆಗೆ ಆದಾಯ ವೃದ್ಧಿಯ ಗುರಿ- ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ

by admin
November 23, 2026
0

ಮಂಡ್ಯ: ಪರಿಸರ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ, ದೀರ್ಘಾವಧಿ ಕೃಷಿ ಪದ್ಧತಿಯ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಮಹತ್ವದ ಉದ್ದೇಶದಿಂದ ಐದು ಗ್ರಾಮಗಳ 25 ರೈತರಿಗೆ...

chupa-chups-bubble-gum-sticks-cola-lemon-flavour-rs-10-india-launch

ಚ್ಯೂಯಿಂಗ್‌ ಗಮ್ ಪ್ರಿಯರಿಗೆ ಭರ್ಜರಿ ಮಜಾ: ಮಾರುಕಟ್ಟೆಗೆ ಬಂದಿದೆ ‘ಕೋಲಾ ಲೆಮನ್’ ಸ್ವಾದದ ₹10ರ ‘ಚುಪಾ ಚುಪ್ಸ್ ಬಬಲ್ ಗಮ್ ಸ್ಟಿಕ್ಸ್’

by admin
November 23, 2026
0

ಬೆಂಗಳೂರು: ಲಾಲ್ಲಿಪಾಪ್ ಮತ್ತು ಹುಳಿ - ಸಿಹಿ ಕ್ಯಾಂಡಿಗಳ ಮೂಲಕ ಯುವಜನತೆಯ ಮನಗೆದ್ದಿರುವ ‘ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾ’ ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್ ‘ಚುಪಾ ಚುಪ್ಸ್’, ಇದೀಗ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram