india | ಏಷ್ಯಾಕಪ್ ಫೈನಲ್ ತಲುಪಿದ ಟೀಂ ಇಂಡಿಯಾ ವುಮೆನ್ಸ್
ಮಹಿಳಾ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಗುರುವಾರ ಥಾಯ್ ಲ್ಯಾಂಡ್ ವಿರುದ್ಧದ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವುಮೆನಸ್ ತಂಡ 74 ರನ್ ಗಳಿಂದ ಗೆಲುವು ಸಾಧಿಸಿದೆ.
149 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಥಾಯ್ ಲೆಂಡ್ ವುಮೆನ್ಸ್ ಭಾರತದ ಬೌಲಿಂಗ್ ದಾಳಿಗೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 74 ರನ್ ಗಳಿಗೆ ಸರ್ವಪತನಗೊಂಡಿತು.

ಥಾಯ್ ಲ್ಯಾಂಡ್ ಪರ ಚವಾಯಿ 21, ನಟ್ಟಾಯಾ ಬುಚಾತಮ್ 21 ರನ್ ಗಳಿಸಿದರು.
ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್ ಪಡೆದರೇ, ರಾಜೇಶ್ವರಿ ಗಾಯಕ್ವಾಡ್ ಎರಡು, ಷಫಾಲಿ ವರ್ಮ, ಸ್ನೇಹ್ ರಾಣಾ, ರೇಣುಕಾಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳನ್ನು ಗಳಿಸಿದರು.
ಶಫಾಲಿ ವರ್ಮಾ 42 ರನ್ ಗಳಿಸಿದರು. ಕ್ಯಾಪ್ಟನ್ ಹರ್ಮನ್ ಪ್ರಿತ್ ಕೌರ್ 36 ರನ್, ಜೆಮಿಯಾ ರೋಡ್ರಿಗ್ಸ್ 27 ರನ್ ಗಳಿಸಿದರು.








