Team India | ಶೀಘ್ರದಲ್ಲಿಯೇ ಹೊಸ ಟೀಂ ಇಂಡಿಯಾ
ಟಿ 20 ವಿಶ್ವಕಪ್ ಬಳಿಕ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲಿವೆ ಎಂದು ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಭವಿಷ್ಯ ಹೇಳಿದ್ದಾರೆ.
2021ರ ಟಿ 20 ವಿಶ್ವಕಪ್ ತಂಡಕ್ಕೆ ಹೋಲಿಕೆ ಮಾಡಿದ್ರೆ ಪ್ರಸ್ತುತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ವಿಶ್ವಕಪ್ ಬಳಿಕ ತಂಡ ಅದೇ ರೀತಿ ಇರುವುದಿಲ್ಲ, ಊಹಿಸದ ಬದಲಾವಣೆಗಳು ಜುರುಗಲಿವೆ ಎಂದಿದ್ದಾರೆ.
ಅತೀ ಶೀಘ್ರದಲ್ಲಿ ನಾವು ಹೊಸ ಟೀಂ ಇಂಡಿಯಾವನ್ನು ನೋಡಲಿದ್ದೇವೆ ಎಂದು ತಮ್ಮದೇಯಾದ ರೀತಿಯಲ್ಲಿ ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.
ಶಾಸ್ತ್ರಿ ಒಂದು ಕಡೆ ಟೀಂ ಇಂಡಿಯಾದಲ್ಲಿ ಬದಲಾವಣೆಗಳು ತಪ್ಪದೂ ಎಂದು, ಪ್ರಸ್ತುತ ಟೀಂ ಇಂಡಿಯಾ ಬ್ಯಾಟಿಂಗ್ ಲೈನಪ್ ಬಗ್ಗೆ ಹೊಗಳಿದ್ದಾರೆ.

ಆರಂಭಿಕರಾಗಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಒನ್ ಡೌನ್ ನಲ್ಲಿ ವಿರಾಟ್, ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್, ಐದನೇ, ಆರನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ, ಪಂತ್/ ದಿನೇಶ್ ಕಾರ್ತಿಕ್ ಇದ್ದು, ಭಾರತ ತಂಡ ಈ ಹಿಂದೆ ಎಂದೂ ಇಲ್ಲದ ರೀತಿಯಲ್ಲಿ ಬಲಿಷ್ಟವಾಗಿದೆ.
ಅದೇ ರೀತಿ ಭಾರತ ಫೀಲ್ಡಿಂಗ್ ಇನ್ನೂ ಕೊಂಚ ಸುಧಾರಿಸಬೇಕು ಎಂದ ಶಾಸ್ತ್ರಿ, ಈ ವಿಭಾಗದಲ್ಲಿ ಸುಧಾರಿಸಿದ್ರೆ ತಂಡ ಮತ್ತಷ್ಟು ಬಲಿಷ್ಟವಾಗಲಿದೆ.
ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗೆ ಇದೇ ಕೊನೆಯ ಟಿ 20 ವಿಶ್ವಕಪ್ ಆಗಲಿದೆ ಎಂದು ಹೊಸ ಬಾಂಬ್ ಸಿಡಿಸಿದರು.








