ಹೊಸದಿಲ್ಲಿ, ಜೂನ್ 8: ಪಿಐಬಿ ಪ್ರಧಾನ ನಿರ್ದೇಶಕ ಕೆ. ಎಸ್. ಧಾಟ್ವಾಲಿಯಾ ಅವರಿಗೆ ಕೊರೋನಾ ಸೋಂಕು ಧೃಢಪಟ್ಟಿದ್ದು, ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಸ್ಥಿತಿಗತಿ ಬಗ್ಗೆ ಅಧಿಕೃತ ಮಾಹಿತಿ ಹೊರಬಿದಿಲ್ಲ.
ಅವರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮಾರ್ ಹಾಗೂ ಪ್ರಕಾಶ್ ಜಾವಡೆಕರ್ ಅವರೊಂದಿಗೆ ಸೋಮವಾರ ಮತ್ತು ಬುಧವಾರ ಮಾಧ್ಯಮಗೋಷ್ಟಿ ನಡೆಸಿದ್ದು, ಈ ಇಬ್ಬರು ಕೇಂದ್ರ ಸಚಿವರಿಗೆ ಕೊರೋನಾ ಆತಂಕ ಶುರುವಾಗಿದೆ. ಇದೀಗ ಇವರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚಲಾಗುತ್ತಿದ್ದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ದ ಕಚೇರಿಗೆ ಬೀಗ ಹಾಕಲಾಗಿದೆ.
ಆರೋಗ್ಯ ಇಲಾಖೆಯು ಪಿಐಬಿ ಕಛೇರಿಯನ್ನು ತೆರೆಯಲು ಅನುಮತಿ ನೀಡುವವರೆಗೆ ಪಿಐಬಿ ಕಛೇರಿಯನ್ನು ಮುಚ್ಚಲು ತೀರ್ಮಾನಿಸಿದ್ದು, ಸಂಪೂರ್ಣ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಸದ್ಯಕ್ಕೆ ಪಿಐಬಿ ಕಚೇರಿಯನ್ನು ಶಾಸ್ತ್ರಿ ಭವನಕ್ಕೆ ಸ್ಥಳಾಂತರಿಸಲಾಗಿದೆ.
ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್
ತುಮಕೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಹೊಸ ಪಿಂಚಣಿ ಪದ್ಧತಿಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ...








