ಮುಂಬೈ, ಜೂನ್ 9: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಷ್ಟರಲ್ಲೇ ಭಾರತ ಮತ್ತು ಚೀನಾ ಗಡಿರೇಖೆಯಲ್ಲಿ ಸೃಷ್ಟಿಯಾಗಿರುವ ವಿವಾದವನ್ನು ಬಗೆಹರಿಸುವುದಾಗಿ ಹೇಳಿದ್ದು, ಗಡಿಯಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳಿಗೆ ಪಾರ್ಲಿಮೆಂಟ್ನ ಒಳಗೆ ಉತ್ತರಿಸುತ್ತೇನೆ ಎಂದರು.
ಮಹಾರಾಷ್ಟ್ರ ಜನ್ ಸಂವಾದ್ ವರ್ಚುವಲ್ ರಾ ್ಯಲಿಯಲ್ಲಿ ಭಾರತ ಮತ್ತು ಚೀನಾ ಗಡಿರೇಖೆಯ ಸಮಸ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಭಾರತ-ಚೀನಾ ಗಡಿ ವಿವಾದ ಹಲವಾರು ವರ್ಷಗಳಿಂದಲೂ ಇದ್ದು, ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.

ಇಂದು ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು, ಭಾರತ- ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ, ಅವರಿಗೆಲ್ಲಾ ನಾನು ರಕ್ಷಣಾ ಸಚಿವನಾಗಿ ಪಾರ್ಲಿಮೆಂಟ್ನ ಒಳಗೆ ಉತ್ತರಿಸಲು ಇಷ್ಟಪಡುತ್ತೇನೆ ಎಂದ ರಾಜನಾಥ್ ಸಿಂಗ್ ನಾನು ಜನರನ್ನು ದಾರಿ ತಪ್ಪಿಸುವುದಿಲ್ಲ ಎಂದು ಖಡಕ್ ಆಗಿ ವಿರೋಧ ಪಕ್ಷದ ನಾಯಕರಿಗೆ ಉತ್ತರ ಕೊಟ್ಟರು.
ಈಗಾಗಲೇ ಭಾರತ-ಚೀನಾ ಗಡಿಯಲ್ಲಿ ತನ್ನ ಸೈನ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಜಮಾಯಿಸಿದ್ದು, ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದ್ದು, ಲಡಾಖ್ ನಲ್ಲಿಯೂ ಸೈನ್ಯವನ್ನು ಸೇರಿಸಿದೆ.








